ಕಾರ್ಯಕ್ರಮದಲ್ಲಿ ಸಂಸದ ರಾಜೀವ್ ಚಂದ್ರಶೇಖರ್, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಯುನೈಟೆಡ್ ಬೆಂಗಳೂರು ಸಂಚಾಲಕ ಎನ್. ಆರ್. ಸುರೇಶ್, "ನಮ್ಮ ಬೆಂಗಳೂರು ಪ್ರತಿಷ್ಠಾನ" ಸಿಇಒ ಶ್ರೀಧರ್ ಪಬ್ಬಿಸೆಟ್ಟಿ ಸೇರಿದಂತೆ 72 ವಾರ್ಡ್‌'ಗಳ ಪಾಲಿಕೆ ಸದಸ್ಯರು, ಸ್ವಯಂಸೇವಕರು, ಸ್ಥಳೀಯರು, ಪೌರ ಕಾರ್ಮಿಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರು(ಅ. 02): ನಗರದ ಕೆರೆ, ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಯುನೈಟೆಡ್ ಬೆಂಗಳೂರು ಸಂಘಟನೆ ಗಾಂಧಿ ಜಯಂತಿ ಅಂಗವಾಗಿ ಇಂದು ನಗರದ 72 ವಾರ್ಡ್‌'ಗಳಲ್ಲಿ ಏಕಕಾಲಕ್ಕೆ ‘ಮೆಗಾ ಕ್ಲೀನಥಾನ್’ ಹೆಸರಿನಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಅಭಿಯಾನವು ಇಂದು ಸೋಮವಾರ ಬೆಳಗ್ಗೆ 7ಕ್ಕೆ ಪ್ರಾರಂಭವಾಗಿದೆ. ಬೆಳಗ್ಗೆ 8ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿವಾಸದ ಬಳಿ, 8:35ಕ್ಕೆ ಪಟ್ಟಾಭಿರಾಮನಗರ, 9:40ಕ್ಕೆ ಹಲಗೆವಡೇರಹಳ್ಳಿ ಕೆರೆ, 10:30ಕ್ಕೆ ನಾಗರಬಾವಿ ವಾರ್ಡ್‌'ನಲ್ಲಿ ಅಭಿಯಾನ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸದ ರಾಜೀವ್ ಚಂದ್ರಶೇಖರ್, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಯುನೈಟೆಡ್ ಬೆಂಗಳೂರು ಸಂಚಾಲಕ ಎನ್. ಆರ್. ಸುರೇಶ್, "ನಮ್ಮ ಬೆಂಗಳೂರು ಪ್ರತಿಷ್ಠಾನ" ಸಿಇಒ ಶ್ರೀಧರ್ ಪಬ್ಬಿಸೆಟ್ಟಿ ಸೇರಿದಂತೆ 72 ವಾರ್ಡ್‌'ಗಳ ಪಾಲಿಕೆ ಸದಸ್ಯರು, ಸ್ವಯಂಸೇವಕರು, ಸ್ಥಳೀಯರು, ಪೌರ ಕಾರ್ಮಿಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. 72 ವಾರ್ಡ್‌'ಗಳ ಜತೆಗೆ 9 ಕೆರೆಗಳಲ್ಲಿಯೂ ಅಭಿಯಾನ ನಡೆಯುತ್ತಿದೆ. ಸಂಸದ ರಾಜೀವ್ ಚಂದ್ರಶೇಖರ್ ಕೋರಮಂಗಲದಿಂದ ನಾಗರಬಾವಿಯವರೆಗೆ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ವಚ್ಛತಾ ಕಾರ್ಯ ಹಮ್ಮಿಕೊಂಡ ಸ್ಥಳದಲ್ಲಿ ಮತ್ತೆ ಕಸ ಹಾಕದಂತೆ ತಡೆಯುವುದಕ್ಕಾಗಿ ಆ ಸ್ಥಳದಲ್ಲಿ ಕಲಾವಿದರು ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಡೆಂಘೀ ಮತ್ತು ಚಿಕೂನ್‌'ಗುನ್ಯಾ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

ಯಾವ್ಯಾವ ವಾರ್ಡ್'ಗಳಲ್ಲಿ ಯಾರ್ಯಾರು ಸ್ವಚ್ಛತಾ ಕಾರ್ಯದ ಜವಾಬ್ದಾರಿ ಹೊತ್ತಿದ್ದಾರೆ ಎಂಬ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

epaperkannadaprabha.com