ಸಾವಿರ ಮಂದಿ ಸೈನಿಕರು ದೋಣಿಗಳನ್ನು ಬಳಸಿ ಕೆರೆಯಲ್ಲಿರುವ ಕಳೆಯನ್ನು ಸ್ವಚ್ಛ ಮಾಡಿದರು. ಕೆರೆಯ ಬದಿಗೆ ಸುರಿಯಲಾದ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯ, ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೆರೆಯಿಂದ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿತ್ತು.ಇದನ್ನ ಸಹ ಸೈನಿಕರು ಸ್ವಚ್ಛಗೊಳಿಸಿದರು.

ಬೆಂಗಳೂರು(ಅ.11): ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ರಕ್ಷಣಾ ತರಬೇತಿ ಕೇಂದ್ರದ ಮದ್ರಾಸ್‌ ಎಂಜಿನಿಯರ್‌ ಪಡೆ (ಎಂಇಜಿ) ಸೈನಿಕರು ನಗರದ ಹಲಸೂರು ಕೆರೆಯನ್ನು ಸ್ವಚ್ಛಗೊಳಿಸಿದರು.

ಸದಾ ಕಾಲ ನೀರು ಇರುವುದರಿಂದ ಹಲಸೂರು ಕೆರೆಯನ್ನು ಸೈನಿಕರ ತರಬೇತಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ನಗರದ ಕೊಳಚೆ ನೀರು ಪ್ರತಿ ದಿನ ಕೆರೆಗೆ ಸೇರ್ಪಡೆಯಾಗುತ್ತಿರುವುದರಿಂದ ಕೆರೆಯಲ್ಲಿ ಕಳೆ, ಹುಲ್ಲು ಬೆಳೆದು ದುರ್ವಾಸನೆ ಬರುತ್ತಿತ್ತು. ಹೀಗಾಗಿ ಸೇನೆಯು ಮಂಗಳವಾರ ಕೆರೆಯನ್ನು ಸ್ವಚ್ಛಗೊಳಿಸಿತು.

ಸಾವಿರ ಮಂದಿ ಸೈನಿಕರು ದೋಣಿಗಳನ್ನು ಬಳಸಿ ಕೆರೆಯಲ್ಲಿರುವ ಕಳೆಯನ್ನು ಸ್ವಚ್ಛ ಮಾಡಿದರು. ಕೆರೆಯ ಬದಿಗೆ ಸುರಿಯಲಾದ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯ, ಅಪಾಯಕಾರಿ ಆಸ್ಪತ್ರೆ ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕೆರೆಯಿಂದ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿತ್ತು.ಇದನ್ನ ಸಹ ಸೈನಿಕರು ಸ್ವಚ್ಛಗೊಳಿಸಿದರು.

ಕಳೆದ 10 ತಿಂಗಳಿಂದ ನಿರಂತವಾಗಿ ಕೆರೆಯ ಆವರಣವನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೆರೆ ಸ್ವಚ್ಛತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೆರೆ ಸ್ವಚ್ಛತೆ ಸಂಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಾಗಿರಲಿಲ್ಲ. ಅನಿವಾರ್ಯವಾಗಿ ಸೈನಿಕರು ಸ್ವಚ್ಛತಾ ಕಾರ್ಯ ನಡೆಸಿದರು