ರಸ್ತೆಗಳಲ್ಲಿ, ಟ್ರಾಫಿಕ್ ಜಾಮ್'ಗಳನ್ನು ಭಿಕ್ಷುಕರನ್ನು ನೋಡುತ್ತೇವೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಅವರು ದಿನವೊಂದಕ್ಕೆ, ತಿಂಗಳಿಗೊಂದಕ್ಕೆ ಎಷ್ಟು ದುಡಿಯುತ್ತಾರೆ ಎಂಬುದನ್ನು ಯಾವತ್ತಾದ್ರೂ ಯೋಚಿಸಿದ್ದೀರಾ? ಇಲ್ಲೊಬ್ಬ ಭಿಕ್ಷುಕನಿದ್ದಾನೆ. ಇವನು ತಿಂಗಳ ಸಂಬಳ ಕೇಳಿದರೆ ದಂಗಾಗೋದು ಗ್ಯಾರಂಟಿ.
ನವದೆಹಲಿ (ಜ.04): ರಸ್ತೆಗಳಲ್ಲಿ, ಟ್ರಾಫಿಕ್ ಜಾಮ್'ಗಳನ್ನು ಭಿಕ್ಷುಕರನ್ನು ನೋಡುತ್ತೇವೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಅವರು ದಿನವೊಂದಕ್ಕೆ, ತಿಂಗಳಿಗೊಂದಕ್ಕೆ ಎಷ್ಟು ದುಡಿಯುತ್ತಾರೆ ಎಂಬುದನ್ನು ಯಾವತ್ತಾದ್ರೂ ಯೋಚಿಸಿದ್ದೀರಾ? ಇಲ್ಲೊಬ್ಬ ಭಿಕ್ಷುಕನಿದ್ದಾನೆ. ಇವನು ತಿಂಗಳ ಸಂಬಳ ಕೇಳಿದರೆ ದಂಗಾಗೋದು ಗ್ಯಾರಂಟಿ.

ಈ ಚಿತ್ರದ್ಲಲಿರೋ ವ್ಯಕ್ತಿ ಹೆಸರು ಚೋಟು. ತಿಂಗಳಿಗೆ ಬರೀ ಭಿಕ್ಷಾಟನೆಯಲ್ಲಿ 30 ಸಾವಿರ ದುಡಿಯುತ್ತಾರೆ. ಭಿಕ್ಷಾಟನೆಯ ಜೊತೆ ವೆಸ್ಟಿಜೆ ಎನ್ನುವ ಕಂಪನಿಯಲ್ಲಿ ಸೇಲ್ಸ್,ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ರೈಲ್ವೇ ನಿಲ್ದಾಣಗಳಲ್ಲಿ ಆ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ತಮ್ಮದೇ ಸ್ವಂತ ಪಾತ್ರೆ ಅಂಗಡಿಯನ್ನೂ ಹೊಂದಿದ್ದಾರೆ. ಇವರಿಗೆ ಮೂವರಿಗೆ ಪತ್ನಿಯರಿದ್ದು ಒಬ್ಬ ಪತ್ನಿ ಈ ಅಂಗಡಿಯನ್ನು ನೋಡಿಕೊಳ್ಳುತ್ತಾರೆ. ತಿಂಗಳಿಗೆ ಬರೋಬ್ಬರಿ 4 ಲಕ್ಷ ಗಳಿಸುತ್ತಿರುವುದಾಗಿ ಚೋಟು ಅವರೇ ಒಪ್ಪಿಕೊಂಡಿದ್ದಾರೆ. ಪ್ರತಿ ತಿಂಗಳೂ ಹಣವನ್ನೂ ಕಳಿಸುತ್ತಾರೆ.
