ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್‌ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ನವದೆಹಲಿ: ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್‌ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವದೆಹಲಿಯ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಎಂಜಿನಿಯರಿಂಗ್ ಆ್ಯಂಡ್ ಬಯೋಟೆಕ್ನಾಲಜಿ (ಐಸಿಜಿಇಬಿ) ಸಂಸ್ಥೆಯ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ. ಅಮುಕ್ಕರ ಚೂರಣಂ ಹಾಗೂ ನೀಲವೆಂಬು ಕುಡಿನೀರ್ ಎಂಬುವೇ ಈ 2 ಔಷಧಿಗಳು.

ಅಮುಕ್ಕರ ಚೂರಣಂ: ಅಮುಕ್ಕರ ಚೂರಣಂನಲ್ಲಿ ಅಶ್ವಗಂಧ ಇರುತ್ತದೆ. ಇದರಲ್ಲಿನ ಮುಖ್ಯ ಅಂಶವು ಚಿಕೂನ್‌ಗುನ್ಯಾ,ರಕ್ತ ಮತ್ತು ಮೆದುಳಿನ ನಡುವೆ ವೈರಸ್ ದಾಟುವುದನ್ನು ಇದು ಸಮರ್ಥವಾಗಿ ತಡೆಯಬಲ್ಲದು. ನೀಲವೆಂಬು ಕುಡಿನೀರ್: ಇದು ಚಿಕೂನ್‌ಗುನ್ಯಾ ವೈರಸ್ ಪ್ರವೇಶವನ್ನು ತಡೆಗಟ್ಟುತ್ತದೆ ಹಾಗೂ ಡೆಂಘೀ ವೈರಸ್‌ಗಳ ಪುನರವರ್ತನೆಯನ್ನು ನಿಲ್ಲಿಸುತ್ತದೆ.