Asianet Suvarna News Asianet Suvarna News

ಹುಬ್ಬಳ್ಳಿ ಕಿಮ್ಸ್ 'ನಲ್ಲಿ ವೈದ್ಯರು, ಸಿಬ್ಬಂದಿ ಕೊರತೆ: ಇಲ್ಲಿ ವೈದ್ಯ ವಿದ್ಯಾರ್ಥಿಗಳೇ ನೀಡ್ತಾರೆ ಚಿಕಿತ್ಸೆ!

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಬಡರೋಗಿಗಳ ಪಾಲಿಗೆ ಸಂಜೀವಿನಿ ಎನ್ನುತ್ತೇವೆ. ಹಾಗಂತ ಈ ಆಸ್ಪತ್ರೆಗೆ ರೋಗಿಗಳು ಹೋದರೆ ಅವರ ಕಥೆ ಅಷ್ಟೆ, ಯಾಕಂದ್ರೆ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಲ್ಲ. ಬದಲಾಗಿ ನೀಡುವವರು ವೈದ್ಯ ವಿದ್ಯಾರ್ಥಿಗಳು! ಯಾಕಂತೀರಾ? ಇಲ್ಲಿದೆ ವಿವರ

Medical students are giving the treatment in KIMS Hospital

ಹುಬ್ಬಳ್ಳಿ(ಸೆ.04): ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಅಂದ್ರೆ ಬಡರೋಗಿಗಳ ಪಾಲಿನ ಸಂಜೀವಿನಿ. ಆದ್ರೆ ಇದೇ ಕಿಮ್ಸ್ ಆಸ್ಪತ್ರೆ ಇದೀಗ ರೋಗಿಗಳ ಜೀವಕ್ಕೆ ಕುತ್ತು ತರುವಂತಿದೆ. ವೈದ್ಯರು, ಸಿಬ್ಬಂದಿ ಇಲ್ಲದೇ ವೈದ್ಯ ವಿದ್ಯಾರ್ಥಿಗಳೇ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲೀಗ ಎಂಬಿಬಿಎಸ್ ಸೀಟ್'ಗಳನ್ನ 200ಕ್ಕೆ ಹೆಚ್ಚಿಸಲಾಗಿದೆಯಾದರೂ ಅದಕ್ಕೆ ಬೇಕಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಲ್ಲ.

ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

ಕಿಮ್ಸ್ ನಲ್ಲಿ   73 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿದ್ದರು ಅದರಲ್ಲೀಗ ಕೇವಲ  55 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇನ್ನು 109 ಸಹಾಯಕ ಪ್ರಾಧ್ಯಾಪಕರಿದ್ರೂ ಸದ್ಯ ಕೆಲಸ ಮಾಡ್ತಿರೋದು 91 ಮಂದಿ ಮಾತ್ರ. ಇನ್ನು ಬೋಧಕ ಮತ್ತು ಕಿರಿಯ ಬೋಧಕ ಹುದ್ದೆ 100 ಇದ್ರೂ ಈ ಪೈಕಿ ಕೇವಲ 9 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 38 ಬೋಧಕೇತರ ಸಿಬ್ಬಂದಿ  ಪೈಕಿ 26 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 35 ಹಿರಿಯ ಶುಶ್ರೂಷಕರ ಹುದ್ದೆಗಳ ಪೈಕಿ 20 ಹುದ್ದೆ ಖಾಲಿಯಿವೆ. ಹೀಗೆ ಒಟ್ಟು  327 ಹುದ್ದೆಗಳ ಪೈಕಿ 110 ಹುದ್ದೆಗಳು ಖಾಲಿ ಉಳಿದಿವೆ.

ಇದರ  ಮಧ್ಯೆ, ಕಿಮ್ಸ್' ನಲ್ಲಿ ಎರವಲು ಸೇವೆ ಮಾಡುತ್ತಿದ್ದ ಶೇ. 25ರಷ್ಟು ಸಿಬ್ಬಂದಿಯನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಾಪಸ್ ತನ್ನ ಮಾತೃ ಸಂಸ್ಥೆಗೆ ಕರೆಯಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಸಿಬ್ಬಂದಿ ಕೊರತೆ ಹೆಚ್ಚಾಗಲಿದ್ದು, ಇದು ರೋಗಿಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಇನ್ನಾದರೂ ವೈದ್ಯಕೀಯ ಶಿಕ್ಷಣ ಇಲಾಖೆ  ಎಚ್ವೆತ್ತು ಸಿಬ್ಬಂದಿ ನೇಮಕಕ್ಕೆ ಮುಂದಾಗಬೇಕಿದೆ. ಇಲ್ಲದೇ ಹೋದರೆ ಕಿಮ್ಸ್ ಆಸ್ಪತ್ರೆ ರೋಗಿಗಳ ಪಾಲಿಗೆ ಯಮಸ್ವರೂಪಿಯಾಗುವುದರಲ್ಲಿ ಅನುಮಾನವೇ ಇಲ್ಲ.

 

Follow Us:
Download App:
  • android
  • ios