ರಾಜ್ಯದಲ್ಲಿ 24 ಸಾವಿರ ಔಷಧ ಮಾರಾಟಗಾರರಿದ್ದಾರೆ. ಇವರಲ್ಲಿ 6500 ಸಾವಿರ ಮಂದಿ ಬೆಂಗಳೂರಿನಲ್ಲಿಯೇ ಮಳಿಗೆ ಹೊಂದಿದ್ದು, ಬಂದ್ ದಿನ ಸೇವೆ ಸ್ಥಗಿತಗೊಳಿಸಲಿದ್ದಾರೆ. 

ಬೆಂಗಳೂರು[ಸೆ.27]: ಆನ್ ಲೈನ್ ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ಮಾರಾಟಗಾರರು ನಾಳೆ ಬಂದಿಗೆ ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಆಂಡ್ ಡ್ರಗ್ಗಿಸ್ಟ್ ಸಂಸ್ಥೆ ಒಂದು ದಿನ ಬಂದಿಗೆ ಕರೆ ನೀಡಿದೆ. ಹೀಗಾಗಿ ರಾಜ್ಯದಲ್ಲೂ ಔಷಧ ಮಳಿಗೆಗಳು ಬಂದ್ ಆಗಲಿವೆ.

ರಾಜ್ಯದಲ್ಲಿ 24 ಸಾವಿರ ಔಷಧ ಮಾರಾಟಗಾರರಿದ್ದಾರೆ. ಇವರಲ್ಲಿ 6500 ಸಾವಿರ ಮಂದಿ ಬೆಂಗಳೂರಿನಲ್ಲಿಯೇ ಮಳಿಗೆ ಹೊಂದಿದ್ದು, ಬಂದ್ ದಿನ ಸೇವೆ ಸ್ಥಗಿತಗೊಳಿಸಲಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಹಾಗೂ ಕಾಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಔಷಧ ಮಳಿಗೆಗಳು ರೋಗಿಗಳ ಹಿತದೃಷ್ಟಿಯಿಂದ ತೆರೆದಿಡಲಿವೆ. ಇನ್ನು ಜನರಿಕ್ ಔಷಧ ಮಳಿಗೆಗಳು ಲಭ್ಯವಿರುತ್ತವೆ.