Asianet Suvarna News Asianet Suvarna News

ಸೆ.28ಕ್ಕೆ ಔಷಧಗಳು ಸಿಗೋದಿಲ್ಲ : ಯಾಕೆ?

ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಸೆ. 28 ರಂದು ದೇಶಾದ್ಯಂತ ಔಷಧ ಮಳಿಗೆಗಳ ಮುಷ್ಕರಕ್ಕೆ ಕರೆ ನೀಡಿದೆ.

Medical Shops To Stay Closed On September 28
Author
Bengaluru, First Published Sep 21, 2018, 11:00 AM IST

ಬೆಂಗಳೂರು :  ಆನ್‌ಲೈನ್‌ ಮೂಲಕ ಔಷಧಗಳ ಖರೀದಿ ಹಾಗೂ ಮಾರಾಟಕ್ಕೆ (ಇ-ಫಾರ್ಮಸಿ) ಅವಕಾಶ ನೀಡುವುದನ್ನು ವಿರೋಧಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್‌ ಕೆಮಿಸ್ಟ್‌ ಅಂಡ್‌ ಡ್ರಗ್ಗಿಸ್ಟ್‌ ಸೆ. 28 ರಂದು ದೇಶಾದ್ಯಂತ ಔಷಧ ಮಳಿಗೆಗಳ ಮುಷ್ಕರಕ್ಕೆ ಕರೆ ನೀಡಿದೆ.

 ಈ ಹಿನ್ನೆಲೆಯಲ್ಲಿ ಸೆ.28 ರಂದು ರಾಜ್ಯಾದ್ಯಂತ ಮೆಡಿಕಲ್‌ ಸ್ಟೋರ್‌ಗಳನ್ನು ಬಂದ್‌ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಆರ್‌. ರಘುನಾಥರೆಡ್ಡಿ ತಿಳಿಸಿದ್ದಾರೆ.

ಔಷಧಗಳು ಜನರ ಆರೋಗ್ಯ ಕಾಪಾಡಲು ಇರುವುದೇ ಹೊರತು ಕೆಡಿಸಲು ಅಲ್ಲ. ಔಷಧ ವಿತರಣೆ ಹಾಗೂ ಸಂಗ್ರಹದಲ್ಲಿ ಅದರದ್ದೇ ಆದ ಕ್ರಮಗಳನ್ನು ಅನುಸರಿಸಬೇಕು. ಹೀಗಿರುವಾಗ ಪರವಾನಗಿ ಇಲ್ಲದೆಯೇ ಮನಸೋ ಇಚ್ಚೆ ರಿಯಾಯಿತಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಔಷಧ ವಿತರಿಸಲಾಗುತ್ತಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 6,500, ಕರ್ನಾಟಕದಲ್ಲಿ 24 ಸಾವಿರ ಸೇರಿದಂತೆ ದೇಶಾದ್ಯಂತ 6.5 ಲಕ್ಷ ಔಷಧ ಮಳಿಗೆಗಳನ್ನು ಸೆ.28 ರಂದು ಮುಚ್ಚಲಾಗುವುದು. ಆ ಮೂಲಕ ಆನ್‌ಲೈನ್‌ ಔಷಧ ಮಾರಾಟ ತಡೆಯುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios