ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಲ್ಲಿ ಆಸ್ಪತ್ರೆಗಳೇ ಇಲ್ಲ| 3 ವರ್ಷ ಆಸ್ಪತ್ರೆ ನಿರ್ವಹಿಸಿದರಷ್ಟೇ ವೈದ್ಯಕೀಯ ಕಾಲೇಜಿಗೆ ಮಾನ್ಯತೆ?
ನವದೆಹಲಿ[ಏ.15]: 2011ರಿಂದ 2018ರ ಅವಧಿಯಲ್ಲಿ ಅನುಮೋದನೆ ಪಡೆದುಕೊಂಡ 89 ಹೊಸ ವೈದ್ಯಕೀಯ ಕಾಲೇಜುಗಳ ಪೈಕಿ 39 ಕಾಲೇಜುಗಳಲ್ಲಿ ಆಸ್ಪತ್ರೆಗಳು ಕಾರ್ಯನಿರ್ವಹಿಸದೇ ಇರುವುದು ವೈದ್ಯಕೀಯ ಮಂಡಳಿಯ ತಪಾಸಣೆಯ ವೇಳೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಆಸ್ಪತ್ರೆಗಳು ಕಾರ್ಯನಿರ್ವಹಿಸಿದ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ನೀಡುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ವೈದ್ಯಕೀಯ ಮಂಡಳಿಯ (ಎಂಸಿಐ) ನಿಯಮದ ಪ್ರಕಾರ, 100 ಸೀಟುಗಳನ್ನು ಹೊಂದಿರುವ ವೈದ್ಯಕೀಯ ಕಾಲೇಜೊಂದು, 300 ಹಾಸಿಗೆಯ ಆಸ್ಪತ್ರೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜೊತೆಗೆ ಎಂಸಿಐಗೆ ಅರ್ಜಿ ಸಲ್ಲಿಸುವ ವೇಳೆ ಆಸ್ಪತ್ರೆಯ ಶೇ.60ರಷ್ಟುಹಾಸಿಗೆಗಳು ತುಂಬಿರಬೇಕು. ಮುಂದಿನ ವರ್ಷದ ವಾರ್ಷಿಕ ತಪಾಸಣೆಯ ಆಸ್ಪತ್ರೆಯ ಹಾಸಿಗೆಗಳ ಪ್ರಮಾಣ 500ಕ್ಕೆ ಏರಿಕೆ ಆಗಬೇಕು.
ಆದರೆ, ವೈದ್ಯಕೀಯ ಮಂಡಳಿಯ ತಪಾಸಣೆಯ ವೇಳೆ ಕೆಲವು ವೈದ್ಯಕೀಯ ವೈದ್ಯಕೀಯ ಕಾಲೇಜುಗಳು ಸಿಬ್ಬಂದಿ ಕೊರತೆ ಹಾಗೂ ಆಸ್ಪತ್ರೆಗಳು ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿರುವುದು ನೀತಿ ಆಯೋಗದ ಬಳಿ ಲಭ್ಯವಾಗಿರುವ ದಾಖಲೆಗಳಿಂದ ತಿಳಿದುಬಂದಿದೆ.
