ಶಿವಮೊಗ್ಗ(ಅ.02): ಆತ ದೇವರು ಮತ್ತು ನಿಮ್ಮಗಳ ಮಧ್ಯದ ಕೊಂಡಿ ಎಂದು ಹೇಳಿಕೊಳ್ಲುತ್ತಿದ್ದ. ದೇವರ ಹೆಸರಲ್ಲಿ ಕಷ್ಟ ಹೇಳಿ ಬಂದ ಯುವತಿಯರು, ಮಹಿಳೆಯರು, ಅಪ್ರಾಪ್ತರನ್ನೂ ಬಿಡದೇ ಅತ್ಯಾಚಾರ ಮಾಡಿದ್ದ ರಸಿಕ ಮಹಾಶಯ. ಇಂತಹ ಖರ್ತನಾಕ್​ ಪೂಜಾರಿ ಪೊಲೀಸರ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾನೆ. ೀ ಕುರಿತಾದ ಡಿಟೇಲ್ಸ್.

ಪೂಜಾರಿ ಕುಮಾರ ಅಲಿಯಾಸ್ ಗ್ಯಾರೇಜ್ ಕುಮಾರ ಉರ್ಫ್ ಶಿವಕುಮಾರ ಶಿವಮೊಗ್ಗ ನಗರದ ಸಾಗರ್ ನರ್ಸಿಂಗ್ ಹೋಂ ಬಳಿಯ ಚಾಮುಂಡೇಶ್ವರಿ ದೇವಿಯ ಪೂಜಾರಿ. ದೇವಿಯೇ ಮೈಮೇಲೆ ಬರುತ್ತಾಳೆ, ನಿಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸುತ್ತಾಳೆ, ನೀವು ಬೇಡಿದ್ದು ನೆರವೇರುತ್ತದೆ ಎಂದೆಲ್ಲಾ ನಂಬಿಸಿ ಗೃಹಿಣಿಯರು, ಯುವತಿಯರು, ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗುತ್ತಿದ್ದ. 15 ವರ್ಷದ ಬಾಲಕಿಗೆ ನಿನಗೆ ದೋಷವಿದೆ. ತಾಯತ ಕಟ್ಟಿದರೆ ಸರಿ ಹೋಗುತ್ತದೆ ಎಂದು ರೂಮಿಗೆ ಕರೆದೊಯ್ದು ಮಾನಭಂಗ ಮಾಡಿದ್ದ. ಅಲ್ಲಿಗೆ ಈ ಕ್ರಿಮಿಯ ಪಾಪದ ಕೊಡ ತುಂಬಿತ್ತು ಅನ್ನಿಸುತ್ತದೆ.

ಈ ಆಸಾಮಿ ಮೊದಲಿಗೆ ಗಾಂಧಿನಗರದ ಅಪರ್ಣ ಕಾಂಪ್ಲೆಕ್ಸ್​'ನಲ್ಲಿ ಬೈಕ್​ ಗ್ಯಾರೇಜ್ ಇಟ್ಟುಕೊಂಡಿದ್ದ. ಚಾಮುಂಡೇಶ್ವರಿ ಅವಾಹನೆಯಾಗುತ್ತದೆ ಅಂತ ಬೊಗಳೆ ಬಿಟ್ಟು ಮನೆಯ ಹಿಂದೆ ಗುಡಿ ಕಟ್ಟಿ ನಿಂಬೆಹಣ್ಣು ಮಂತ್ರಿಸಿಕೊಡುವ ಕಯಾಲಿಯಲ್ಲಿ 50ಕ್ಕೂ ಜಾಸ್ತಿ ಮಹಿಳೆಯರಿಗೆ ವಂಚಿಸಿದ್ದಾನೆ. ಆದರೆ ಈ ವಿಷಜಂತು ಹೇಳುವುದೇ ಬೇರೆ.

ಒಟ್ಟಿನಲ್ಲಿ ದೇವರ ಹೆಸರಲ್ಲಿ ಅಮಾಯಕ ಮಹಿಳೆಯರನ್ನು ವಂಚಿಸುತ್ತಿದ್ದ ಈ ಕಿರಾತಕ ಜೈಲು ಪಾಲಾಗಿದ್ದಾನೆ. ಪೊಲೀಸರ ತನಿಖೆಯಿಂದ ಈತನ ಮತ್ತಷ್ಟು ಕರ್ಮಕಾಂಡ ಹೊರಬೀಳಬೇಕಿದೆ.