ಮೀ ಟೂದಲ್ಲಿ ಸಲಿಂಗ ಕಾಮದ ಆರೋಪ | ಅದಿತಿ ಮಿತ್ತಲ್ ವಿರುದ್ಧ ಕನೀಜ್ ಆರೋಪ | 2 ವರ್ಷದ ಹಿಂದೆ ನಡೆದ ಘಟನೆಯಿದು
ಮುಂಬೈ (ಅ. 11): ಭಾರತದಲ್ಲಿ ಮೀ ಟೂ ಆಂದೋಲನ ಆರಂಭವಾದ ಬಳಿಕ ಪುರುಷರ ವಿರುದ್ಧ ಹಲವು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ವಿರುದ್ಧ ಇನ್ನೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ದರಾಗಿರುವ ಅದಿತಿ ಮಿತ್ತಲ್ ವಿರುದ್ಧ ಮತ್ತೋರ್ವ ಕಲಾವಿದೆ ಕನೀಜ್ ಸುರ್ಕಾ,ಇಂಥದ್ದೊಂದು ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ಕನೀಜ್ ‘ಇದು 2 ವರ್ಷಗಳ ಹಿಂದಿನ ಘಟನೆ. ಕಾಮಿಡಿ ಶೋ ಒಂದರಲ್ಲಿ ಭಾಗವಹಿಸಿದ್ದೆ. ಈ ವೇಳೆ ನೂರಾರು ಸಭಿಕರ ಮುಂದೆಯೇ ನನ್ನನ್ನು ಅಪ್ಪಿಕೊಂಡ ಅದಿತಿ ನನ್ನ ತುಟಿಗೆ ಮುತ್ತಿಕ್ಕಿ, ಅವರ ನಾಲಗೆಯನ್ನು ನನ್ನ ಬಾಯಿಯೊಳಗೆ ಹಾಕಿದರು. ಅಷ್ಟೊಂದು ಜನರ ಮುಂದೆ ಈ ಘಟನೆ ನನಗೆ ತೀರಾ ಮುಜುಗರ ಮತ್ತು ಆಘಾತ ಮೂಡಿಸಿತು.
ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಪರಿಮಿತಿ ಇರುತ್ತದೆ. ಆದರೆ ಅದಿತಿ ಅದನ್ನು ಉಲ್ಲಂಘಿಸಿದರು. ಘಟನೆ ನಡೆದ ಒಂದು ವರ್ಷದ ಬಳಿಕ ನಾನು ಅದಿತಿಗೆ ಈ ಬಗ್ಗೆ ಆಕ್ಷೇಪ ಸಲ್ಲಿಸಿದಾಗ ಆಕೆ ಮೊದಲು ಕ್ಷಮೆಯಾಚಿಸಿದಳಾದರೂ, ಬಳಿಕ ನನ್ನ ಬಗ್ಗೆ ವಿಚಿತ್ರ ವರ್ತನೆ ತೋರಿಸಲು ಶುರು ಮಾಡಿದರು’ ಎಂದು ದೂರಿದ್ದಾರೆ.
