ನನಗೂ ರಾಜ್ಯ ಮುಖ್ಯಮಂತ್ರಿ ಆಗೋ ಆಸೆ ಇದೆ. ಆದ್ರೆ ಯಾವುದೇ ದುರಾಸೆ ಇಲ್ಲ. ಹೀಗಂತ ಇಂಗಿತ ವ್ಯಕ್ತಪಡಿಸಿದ್ದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್.
ವಿಜಯಪುರ(ಜೂ.25): ನನಗೂ ರಾಜ್ಯ ಮುಖ್ಯಮಂತ್ರಿ ಆಗೋ ಆಸೆ ಇದೆ. ಆದ್ರೆ ಯಾವುದೇ ದುರಾಸೆ ಇಲ್ಲ. ಹೀಗಂತ ಇಂಗಿತ ವ್ಯಕ್ತಪಡಿಸಿದ್ದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್.
ವಿಜಯಪುರ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ನಡೆದ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವಿ ಆಶೀರ್ವಾದಿಂದ ಜಲ ಸಂಪನ್ಮೂಲ ಸಚಿವನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಿಎಂ ಆಗುವ ಆಸೆ ಇದೆ ಅಂತ ಹೇಳಿದರು.
ಈ ಮೂಲಕ ಎಂ.ಬಿ. ಪಾಟೀಲ್ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವುದು ಪಕ್ಕಾ ಆಗಿದೆ. ಇನ್ನು ಪಾಟೀಲರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
