2ನೇ ಹಂತದಲ್ಲಿ ಎಂ.ಬಿ ಪಾಟೀಲ್ ಗೆ ಮಂತ್ರಿ ಸ್ಥಾನ ?

MB Patil Get Ministerial Post Second Round
Highlights

ರಾಜ್ಯ ನಾಯಕತ್ವದ ಮೂಲಕ ಹೈಕಮಾಂಡ್ ನೀಡಿರುವ ಈ ಭರವಸೆ ಹಾಗೂ ಎಚ್ಚರಿಕೆ ನಂತರವೂ ಅತೃಪ್ತರು ಸಭೆಗಳನ್ನು ನಡೆಸಿದರು. ಈ ನಡುವೆ, ಎರಡನೇ ಹಂತದ ಸಂಪುಟದಲ್ಲಿ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಚನಬಸಪ್ಪ ಶಿವಳ್ಳಿ, ಧರ್ಮಸೇನಾ ಮೊದಲಾದವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಬೆಂಗಳೂರು :  ರಾಜ್ಯ ನಾಯಕತ್ವದ ಮೂಲಕ ಹೈಕಮಾಂಡ್ ನೀಡಿರುವ ಈ ಭರವಸೆ ಹಾಗೂ ಎಚ್ಚರಿಕೆ ನಂತರವೂ ಅತೃಪ್ತರು ಸಭೆಗಳನ್ನು ನಡೆಸಿದರು.

ಈ ನಡುವೆ, ಎರಡನೇ ಹಂತದ ಸಂಪುಟದಲ್ಲಿ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಚನಬಸಪ್ಪ ಶಿವಳ್ಳಿ, ಧರ್ಮಸೇನಾ ಮೊದಲಾದವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಆದರೆ, ಮೊದಲ ಹಂತದಲ್ಲಿ ಸಚಿವ ಸ್ಥಾನ ದೊರೆಯದಿರುವುದರಿಂದ ತೀವ್ರ ಅತೃಪ್ತಿ ಹೊಂದಿರುವ ಎಂ.ಬಿ. ಪಾಟೀಲ ಅವರು ಸಚಿವ ಸ್ಥಾನಕ್ಕೆ ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ ಎಂದು ಅವರ ಆಪ್ತರು ಹೇಳುತ್ತಾರೆ.

ಈ ಆಪ್ತರ ಪ್ರಕಾರ ಉಪ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರಕಿದರೆ ಮಾತ್ರ ಎಂ.ಬಿ. ಪಾಟೀಲ ಅವರು ಒಪ್ಪಬಹುದು. ಇಲ್ಲದಿದ್ದರೆ, ಪ್ರತ್ಯೇಕ ಗುಂಪಿನ ನಾಯಕರಾಗಿ ಉಳಿಯುವ ಸಾಧ್ಯತೆಯಿದೆ.

loader