ಎಂ.ಬಿ.ಪಾಟೀಲ್ ಹಾಗೂ ಕುಟುಂಬಸ್ಥರ ಫೋನ್ ಟ್ಯಾಪಿಂಗ್ ನಡೆದಿರುವ ಪ್ರಕರಣ ಇದೀಗ ಬಯಲಿಗೆ ಬಂದಿದೆ. ಕೇಂದ್ರ ಸರ್ಕಾರದಿಂದಲೇ ನನ್ನ ಮತ್ತು ನನ್ನ ಕುಟುಂಬಸ್ಥರ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಸಚಿವ ಎಂ.ಬಿ.ಪಾಟೀಲ್  ಸುವರ್ಣನ್ಯೂಸ್'ಗೆ ಹೇಳಿದ್ದಾರೆ.  

ಬೆಂಗಳೂರು (ನ.06): ಎಂ.ಬಿ.ಪಾಟೀಲ್ ಹಾಗೂ ಕುಟುಂಬಸ್ಥರ ಫೋನ್ ಟ್ಯಾಪಿಂಗ್ ನಡೆದಿರುವ ಪ್ರಕರಣ ಇದೀಗ ಬಯಲಿಗೆ ಬಂದಿದೆ. ಕೇಂದ್ರ ಸರ್ಕಾರದಿಂದಲೇ ನನ್ನ ಮತ್ತು ನನ್ನ ಕುಟುಂಬಸ್ಥರ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಸುವರ್ಣನ್ಯೂಸ್'ಗೆ ಹೇಳಿದ್ದಾರೆ.

ತಾಂತ್ರಿಕ ತಜ್ಞರಾದ ನನ್ನ ಸ್ನೇಹಿತರಿಂದ ಫೋನ್ ಟ್ಯಾಪಿಂಗ್ ವಿಚಾರ ಪತ್ತೆಯಾಗಿದೆ. ಕೆಲವು ಪರಿಕರಗಳನ್ನು ಬಳಸಿ ಫೋನ್ ಟ್ಯಾಪಿಂಗ್ ಸತ್ಯ ಪತ್ತೆಯಾಗಿದೆ. ನನ್ನ, ನನ್ನ ಪತ್ನಿ ಆಶಾ ಮತ್ತು ಹಿರಿಯ ಪುತ್ರನ ಫೋನ್ ಟ್ಯಾಪಿಂಗ್ ಆಗಿರುವುದಾಗಿ ಪಾಟೀಲ್ ತಿಳಿಸಿದ್ದಾರೆ.

ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ನನ್ನನ್ನು ಬೆದರಿಸುವುದಕ್ಕೆ ಬಿಜೆಪಿ ಯತ್ನಿಸುತ್ತಿದೆ. ಫೋನ್​ ಟ್ಯಾಪ್​​ ಆಗಿರುವುದನ್ನು ಸಾಕ್ಷಿ ಸಮೇತ ತಿಳಿಸಿದ್ದೇನೆ. ಈ ಬಗ್ಗೆ ದೂರು ನೀಡಿಲ್ಲ. ಸಿಎಂ ಸಿದ್ದರಾಮಯ್ಯಗೆ ತಿಳಿಸಿದ್ದೇನೆ. ಸದ್ಯದಲ್ಲಿಯೇ ದೂರು ನೀಡುತ್ತೇನೆ. ಮಾಧ್ಯಮಗಳ ಮುಂದೆ ಶೀಘ್ರವೇ ಡೆಮೋ ಕೂಡಾ ಮಾಡುತ್ತೇನೆ ಎಂದು ಎಂ ಬಿ ಪಾಟೀಲ್ ಸುವರ್ಣನ್ಯೂಸ್'ಗೆ ತಿಳಿಸಿದ್ದಾರೆ.