ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮಗಳ ಹಿಂದುಗಳಿಗೆ ಮೊದಲು ಸ್ಮಶಾನ ಭೂಮಿ ಒದಗಿಸಲಿ, ಆ ಬಳಿಕ ಉತ್ತರ ಪ್ರದೇಶದ ಬಗ್ಗೆ ಮಾತನಾಡಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.

ಲಕ್ನೋ (ಫೆ.21): ಪ್ರಧಾನಿ ನರೆಂದ್ರ ಮೋದಿಯವರ ‘ಸ್ಮಶಾನ-ಖಬರಸ್ತಾನ’ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ಬಿಜೆಪಿಯು ಚುನಾವಣೆಯನ್ನು ಗೆಲ್ಲಲು ದ್ವೇಷ ರಾಜಕಾರಣ ಮಾಡುತ್ತಿದೆಯೆಂದಿದ್ದಾರೆ.

ನಿನ್ನೆ ಮೋದಿಯವರನ್ನು ‘ನೆಗೇಟಿವ್ ದಲಿತ್ ಮ್ಯಾನ್’ ಎಂದು ಕರೆದಿದ್ದ ಮಾಯಾವತಿ, ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮದಲ್ಲಿ ಹಿಂದುಗಳಿಗೆ ಸ್ಮಶಾನ ಭೂಮಿಯಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮಗಳ ಹಿಂದುಗಳಿಗೆ ಮೊದಲು ಸ್ಮಶಾನ ಭೂಮಿ ಒದಗಿಸಲಿ, ಆ ಬಳಿಕ ಉತ್ತರ ಪ್ರದೇಶದ ಬಗ್ಗೆ ಮಾತನಾಡಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.

ಬಿಜೆಪಿಯು ನಿಕೃಷ್ಟ ಮಟ್ಟದ ರಾಜಕೀಯ ಮಾಡುತ್ತಿದೆ. ದೇಶದಲ್ಲಿರುವ ಅತ್ಯಂತ ಕೋಮುವಾದಿ ಪಾರ್ಟಿ ಬಿಜೆಪಿಯಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಫತೇಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ರಂಜಾನ್’ನಲ್ಲಿ ವಿದ್ಯುತ್ ಇದ್ದರೆ ದೀಪಾವಳಿಯಲ್ಲೂ ಇರಬೇಕು. ಭೇದ-ಭಾವ ಇರಬಾರದು. ಗ್ರಾಮದಲ್ಲಿ ಕಬರಸ್ಥಾನ ಮಾಡಿದರೆ ಹಹಿಂದೂಗಳಿಗೆ ಸ್ಮಶಾನವೂ ಇರಬೇಕು ಎಂದು ಹೇಳಿದ್ದರು.