ಬಿಎಸ್ಪಿಗೆ ಅಧಿಕೃತ ಟ್ವೀಟರ್ ಮತ್ತು ಫೇಸ್‌ಬುಕ್ ಖಾತೆಗಳು ಇಲ್ಲ ಬಿಎಸ್‌ಪಿ ಯೂತ್’ ಹೆಸರಿನ ವೆಬ್‌ಸೈಟ್ ಮಾತ್ರ ಕಾರ್ಯನಿರ್ವಹಿಸಲಾಗುತ್ತಿದೆ

ಲಖನೌ(ಜು.24): ಯುವ ಜನಾಂಗಕ್ಕೆ ಪಕ್ಷದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಿದೆ. ಹೀಗಾಗಿ ಬಿಎಸ್‌ಪಿಯಲ್ಲಿ ಪ್ರತ್ಯೇಕ ಯುವ ಘಟಕ ಇಲ್ಲ ಎಂದು ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಹೇಳಿದ್ದಾರೆ.

ಅಲ್ಲದೆ, ಪಕ್ಷಕ್ಕೆ ಸಂಬಂಧಿಸಿದಂತೆ ಅಧಿಕೃತ ಟ್ವೀಟರ್ ಮತ್ತು ಫೇಸ್‌ಬುಕ್ ಖಾತೆಗಳು ಇಲ್ಲ. ಒಂದು ವೇಳೆ ಪಕ್ಷದ ಹೆಸರಿನಲ್ಲಿ ಇಂಥ ಖಾತೆಗ ಳನ್ನು ನಿರ್ವಹಿಸುತ್ತಿದ್ದರೆ, ಅವುಗಳೆಲ್ಲವೂ ಅನಧಿ ಕೃತವಾಗಿದ್ದು, ಪಕ್ಷಕ್ಕೂ ಆ ಖಾತೆಗಳಿಗೂ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ. ದೇವ ಶಿಶ್ ಜರಾರಿಯಾ ಎಂಬ ವ್ಯಕ್ತಿ ‘ಬಿಎಸ್‌ಪಿ ಯೂತ್’ ಹೆಸರಿನ ವೆಬ್‌ಸೈಟ್ ನಿರ್ವಹಿಸುತ್ತಿದೆ.