ಬಿಜೆಪಿ ಗೆಲುವಿಗೆ ಇವಿಎಂನಲ್ಲಿ ದೋಷ ಹಾಗೂ ಚುನಾವಣಾ ಆಯೋಗವೇ ಕಾರಣ ಎಂದು ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಲಖನೌ (ಮಾ. 11): ಉತ್ತರ ಪ್ರದೇಶ ಚುನಾವಣೆಗಳ ಫಲಿತಾಂಶಗಳು ಹೊರಬಿದ್ದಿರುವ ಬೆನ್ನಲ್ಲೇ, ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ, ಇಲೆಕ್ಟ್ರಾನಿಕ್ಸ್ ವೋಟಿಂಗ್ ಮಷಿನ್’ಗಳಲ್ಲಿ (ಇವಿಎಂ) ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಗೆಲುವಿಗೆ ಇವಿಎಂನಲ್ಲಿ ದೋಷ ಹಾಗೂ ಚುನಾವಣಾ ಆಯೋಗವೇ ಕಾರಣ ಎಂದು ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.

ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಮತ ಹೋಗಿದ್ದು ಹೇಗೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ಬೇರೆ ಪಕ್ಷಗಳ ಮತಗಳು ಸಹ ಬಿಜೆಪಿಗೆ ಹೋಗಿವೆ ಎಂದು ಆರೋಪಿಸಿದ ಮಾಯಾವತಿ ಯಾವುದೇ ಬಟನ್​ ಒತ್ತಿದರೂ ಬಿಜೆಪಿಗೇ ಮತ ಹೋಗುತ್ತಿತ್ತು, ಮತಯಂತ್ರದ ದೋಷ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ, ಆದುದರಿಂದ ಫಲಿತಾಂಶ ರದ್ದು ಮಾಡಿ ಮರು ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.