25ರಿಂದ ರಾಜ್ಯದ ನಾಲ್ಕು ಕಡೆ ಜೆಡಿಎಸ್‌ ಪರ ಮಾಯಾವತಿ ರ್ಯಾಲಿ

First Published 20, Apr 2018, 12:50 PM IST
Mayawati Campaign For JDS
Highlights

ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಏ.25ರಿಂದ ನಾಲ್ಕುದಿನಗಳ ಕಾಲ ರ್ಯಾಲಿ ಮಾಡಲಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಏ.25ರಿಂದ ನಾಲ್ಕುದಿನಗಳ ಕಾಲ ಮೈಸೂರು, ಚಿತ್ರದುರ್ಗ, ಬೆಳಗಾವಿ, ಮುಂಬೈ ಕರ್ನಾಟಕ ಮತ್ತು ಬೀದರ್‌ನಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗಳ ಪರ ಏ.25ರಂದು ಮೈಸೂರಿನಲ್ಲಿ, ಏ.26ರಂದು ಚಿತ್ರದುರ್ಗದಲ್ಲಿ ಮಾಯಾವತಿ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಳಗಾವಿಯಲ್ಲಿ ಮೇ 5ರಂದು ಬೆಳಗಾವಿಯಲ್ಲಿ ಮತ್ತು ಮೇ 6ರಂದು ಬೀದರ್‌ನಲ್ಲಿ ಪ್ರಚಾರ ರಾರ‍ಯಲಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಕುಮಾರ ಸ್ವಾಮಿ ಅವರು ರಾರ‍ಯಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್‌ ಅಲಿ ಹೇಳಿದ್ದಾರೆ.

ಬಿಎಸ್‌ಪಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

loader