ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ

ಶಿಮ್ಲಾ ಸಮೀಪದ ರಾಷ್ಟೀಯ ಹೆದ್ದಾರಿಯಲ್ಲಿ ಇಂದು ನೋಡನೋಡುತ್ತಿದ್ದಂತೆ ಪರ್ವತದ ಗುಡ್ಡ ಕುಸಿದಿದೆ. ಮಣ್ಣನಡಿ ಹತ್ತಾರು ವಾಹನಗಳು ಸಿಲುಕಿ ನುಜ್ಜುನುಜ್ಜಾಗಿವೆ. ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ. ಘಟನಾ ಸ್ಥಳದಿಂದ ಕೆಲವರನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಗುಡ್ಡ ಕುಸಿಯಲು ಕಾರಣವಾಗಿದೆ ಎನ್ನಲಾಗಿದೆ.