ಮುಂಬೈನಲ್ಲಿ ಅಗ್ನಿ ಅವಘಢ: ಅಗ್ನಿಶಾಮಕ ಸಿಬ್ಬಂದಿಗೆ ಗಾಯ..!

First Published 9, Jun 2018, 3:04 PM IST
Massive Fire Breaks Out In Mumbai's Fort Area
Highlights

ಮುಂಬೈನ ಬಂದರು ಪ್ರದೇಶದಲ್ಲಿ ಭಾರೀ ಅಗ್ನಿ ಅವಘಢ

ಪಟೇಲ್ ಚೇಂಬರ್ಸ್ ನಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ

ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿಗೆ ಗಾಯ

ಏಣಿಯಿಂದ ಬಿದ್ದ ಪರಿಣಾಮ ಸಿಬ್ಬಂದಿಗೆ ಪೆಟ್ಟು

ಮುಂಬೈ (ಜೂ.9): ಮುಂಬೈನ ಬಂದರು ಪ್ರದೇಶದ ಪಟೇಲ್ ಚೇಂಬರ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಏಣಿಯಿಂದ ಬಿದ್ದು ಗಾಯಗೊಂಡಿದ್ದಾರೆ.

ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಅಗ್ನಿಶಾಮಕ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ. ಕನಿಷ್ಟ 18 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬೆಂಕಿ ಆರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಕಟ್ಟಡದ ಒಂದು ಭಾಗ ಕುಸಿದ ಕಾರಣ ಜನ ಸಂಚಾರಕ್ಕೂ ಅಡಚಣೆಯಾಗಿದೆ. ಬ್ರಿಟೀಷರ ಕಾಲದ ಕಟ್ಟಡ ಇದಾಗಿದ್ದು, ಅತ್ಯಂತ ಅಪಾಯಕಾರಿ ಕಟ್ಟಡ ವರ್ಗಕ್ಕೆ ಸೇರಿದ್ದ ಇದನ್ನು ಕೆಡವಿ ಹಾಕಲು ನಿರ್ಧರಿಸಲಾಗಿತ್ತು. ಅದೃಷ್ಟವಶಾತ ಯಾವುದೇ ಸಾವು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

loader