ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದನ್ನು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಯಲು ಮಾಡಿದೆ. ಕುತೂಹಲಕಾರಿ ವಿಷಯವೆಂದರೆ ಇದು ನಡೆದಿರುವುದು ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ ಆಗಿದೆ. ರೈತರ ಹೆಸರಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ಏಜೆಂಟರು ತಿಂದು ತೇಗಿದ್ದಾರೆ.
ದಾವಣಗೆರೆ: ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಕೃಷಿ ಭಾಗ್ಯ ಹೆಸರಲ್ಲಿ ಅಧಿಕಾರಿಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವುದನ್ನು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಯಲು ಮಾಡಿದೆ.
ಕುತೂಹಲಕಾರಿ ವಿಷಯವೆಂದರೆ ಇದು ನಡೆದಿರುವುದು ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ ಆಗಿದೆ. ರೈತರ ಹೆಸರಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ಏಜೆಂಟರು ತಿಂದು ತೇಗಿದ್ದಾರೆ. ಕೃಷಿ ಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಮಾಹಿತಿಯೇ ಇಲ್ಲ
ಸರ್ಕಾರಿ ಮಹತ್ವಾಕಾಂಕ್ಷಿ ಯೋಜನೆ ಅಕ್ರಮ ಎರಡು ಮೂರು ಜಿಲ್ಲೆಗಷ್ಟೇ ಸೀಮಿತವಾಗಿಲ್ಲ, ಸ್ವತಃ ತೋಟಗಾರಿಕಾ ಸಚಿವರ ಜಿಲ್ಲೆಯಲ್ಲೇ ಬಹುದೊಡ್ಡ ಅಕ್ರಮ ನಡೆದಿದೆ. ಸುವರ್ಣನ್ಯೂಸ್ ಫಲಾನುಭವಿಗಳ ಪಟ್ಟಿ ಹಿಡಿದು ಹೊರಟಾಗ ಒಬ್ಬೊಬ್ಬ ಯೋಜನಾ ಫಲಾನುಭವಿ ಒಂದೊಂದು ರೀತಿಯಲ್ಲಿ ಮೋಸಹೋಗಿದ್ದಾನೆ. ಸರ್ಕಾರಿ ಅಧಿಕಾರಿಗಳು,ಇಂಜಿನಿಯರ್ ಯೋಜನೆ ಫಲಾನುಭವಿಯಾದ್ರೆ ಇನ್ನೊಂದು ಪ್ರಕರಣದಲ್ಲಿ ಅನಕ್ಷರಸ್ಥ ಫಲಾನುಭವಿಗೆ ಯೋಜನೆಗೆ ಮಾಹಿತಿ ಇಲ್ಲ. ಒಂದು ತಾಲ್ಲೂಕಿನಲ್ಲಿ ಮಧ್ಯವರ್ತಿಯೊಬ್ಬನ ಕಮಿಷನ್ ದಂಧೆ ಅಮಾಯಕ ರೈತರನ್ನು ವಂಚಿಸಿದೆ.
ಜಗಳೂರು ತಾಲ್ಲೂಕಿನಾದ್ಯಂತ ನೆರಳು ಪರದೆಯ ದೊಡ್ಡ ಅಕ್ರಮವೇ ನಡೆದಿದ್ದು ಅಲ್ಲಿನ ಅಧಿಕಾರಿಗಳು ಅಕ್ಷರಶಃ ರೈತರ ಹಣ ನುಂಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ನೆರಳು ಪರದೆಯಿರುವ 18 ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಕು ಹೆಚ್ಚು ಸ್ಥಳಗಳಲ್ಲಿ ನೆರಳು ಪರದೆ ಮಳೆಗಾಳಿಗೆ ಹಾರಿಹೋಗಿದೆ.
ಆದರೆ ಈ ಬಗ್ಗೆ ಮಳೆಗಾಳಿಗೆ ಹರಿದುಹೋಗಿದೆ ಎಂದು ಯಾವೊಬ್ಬ ರೈತನು ಇಲಾಖೆಗೆ ಒಂದು ಸಣ್ಣ ಮನವಿಯನ್ನು ಮಾಡಿಲ್ಲ. ಮಳೆ ಇಲ್ಲದ ಕಾರಣ ಬೋರ್' ವೆಲ್ 'ನಲ್ಲಿ ನೀರು ಒಣಗಿ ಪಾಲಿಹೌಸ್ ಕೃಷಿ ಮಾಡಲಾಗುತ್ತಿಲ್ಲ ಎಂದು ರೈತರು ಸಬೂಬು ಹೇಳುತ್ತಾರೆ.
ಆದರೆ ಮಳೆ ಕೊರತೆ ನಡುವೆಯು ಅದ್ಭುತ ಕೃಷಿ ಮಾಡಿರುವ ಅಲ್ಲೊಂದು ಇಲ್ಲೊಂದು ಪ್ರಕರಣಗಳಿವೆ. ತೋಟಗಾರಿಕಾ ಸಚಿವರ ಜಿಲ್ಲೆಯಲ್ಲಿ ನೆರಳು ಪರದೆಯಲ್ಲಿ ಬಹುದೊಡ್ಡ ಅಕ್ರಮ ನಡೆದಿದ್ದು ಪ್ರಾಮಾಣಿಕ ತನಿಖೆ ನಡೆದು ತಪ್ಪಿತಸ್ಥರಿಗೆ ಒಂದಿಷ್ಟು ಶಿಕ್ಷೆಯಾಗಲಿ ಎಂಬುದು ಸುವರ್ಣನ್ಯೂಸ್ ನ ಆಶಯ
