ನವದೆಹಲಿ[ಜೂ. 23]  ಮುಖಕ್ಕೆ ಮಾಸ್ಕ್ ಹಾಕಿಕೊಂಡ ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಧ್ಯರಾತ್ರಿ ಮಹಿಳಾ ಪತ್ರಕರ್ತೆಯ ಮೇಲೆ ಗುಂಡಿನ ದಾಳಿಮಾಡಿ ಹತ್ಯೆಗೆ ಯತ್ನಿಸಿದೆ.

ನವದೆಹಲಿಯ ವಸುಂಧರಾ ಎನ್‍ಕ್ಲೇವ್‍ನಲ್ಲಿ ಶನಿವಾರ ಮಧ್ಯರಾತ್ರಿ  12:30ರ ವೇಳೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.  ನೋಯ್ಡಾ ನಿವಾಸಿ ಪತ್ರಕರ್ತೆ ಮಿತಾಲಿ ಚಂದೋಲಾ ಮೇಲೆ ಗುಂಡಿನ ದಾಳಿ ನಡೆದಿದೆ.

ಮನೆಯಲ್ಲೇ 'ಗನ್' ತಯಾರಿಸೋದು ಹೇಳಿಕೊಟ್ಟ ಮಹಿಳಾ IPS

ಮಿತಾಲಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಮಾರುತಿ ಸ್ವಿಫ್ಟ್ ಕಾರೊಂದು ಇದ್ದಕ್ಕಿದ್ದಂತೆ ಪತ್ರಕರ್ತೆಯ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಹಾಕಿದೆ. ಬಳಿಕ ಮಾಸ್ಕ್ ಹಾಕಿಕೊಂಡಿದ್ದ ಕೆಲವು ಪುರುಷರು ಆಕೆಯ ಮೇಲೆ ಎರಡು ಬಾರಿ ಗುಂಡಿನ ದಾಳಿ ಮಾಡಿದ್ದು ಒಂದು ಗುಂಡು ಕಾರಿನ ಮುಂಭಾಗದ ವಿಂಡ್ ಷೀಲ್ಡ್ ಗೆ ತಾಕಿದೆ. ಇನ್ನೊಂದು ಗುಂಡು  ಪತ್ರಕರ್ತೆಯ ಕೈಗೆ ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆದರೆ ಗುಂಡಿನ ದಾಳಿ ಮಾಡಿಲ್ಲ. ಮೊಟ್ಟೆಗಳನ್ನು ಎಸೆಯಲಾಗಿದೆ ಎಂದು ಪತ್ರಕರ್ತೆ ಹೇಳಿಕೆ ನೀಡಿರುವುದು ಸಹ ಅನುಮಾನಗಳಿಗೆ ಕಾರಣವಾಗಿದೆ.  ಪತ್ರಕರ್ತೆ ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎಂಬ ವಿಚಾರ ಸಹ ಗೊತ್ತಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.