ಮುಜಾಫರ್ ನಗರದಲ್ಲಿ ಮಹಿಳೆಯೋರ್ವಳು ತನ್ನ ಪತಿ 2ನೇ ಪತ್ನಿಯೊಂದಿಗೆ ವಾಸವಿದ್ದ ಹಿನ್ನೆಲೆಯಲ್ಲಿ ಕೋಪಗೊಂಡು ಗಂಡನ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದು ಸುದ್ದಿಯಾಗಿತ್ತು. ಆದರೆ ಈ ಬಾರಿಯ ಪ್ರಕರಣ ಇನ್ನು ಸ್ವಲ್ಪ ಭಿನ್ನವಾಗಿದೆ. ಈ ಬಾರಿ ಮರ್ಮಾಂಗ ಕಳೆದುಕೊಂಡಿರುವುದು ಪ್ರಿಯಕರ!

ಒಡಿಶಾ(ನ.10)  ಜಗಳ ನಡೆಯುತ್ತಿದ್ದಾಗ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ಒಡಿಶಾದ ಕೆಂಜಾರ್ ಜಿಲ್ಲೆಯ ಬದೌಗಾನ್​ ಗ್ರಾಮದಲ್ಲಿ ಇಂಐ ವಿಚಿತ್ರ ಪ್ರಕರಣ ನಡೆದಿದ್ದು ಕೊಂಚ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮರ್ಮಾಂಗ ಕಳೆದುಕೊಂಡ ಯುವಕನ ಕುಟುಂಬಸ್ಥರು ನೀಡಿದ ದೂರಿನ ಅನ್ವಯ 24 ವರ್ಷದ ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಾಕು ಬಳಸಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಆಯುಧ ವಶಕ್ಕೆ ಪಡೆಯಲಾಗಿದೆ.

ಪತ್ನಿಗೆ ವಿಷ ಕುಡಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಹಾಕಿದ ಪೊಲೀಸ್ ಪತಿ!

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮಂಗಳವಾರ ಚೆನ್ನೈನಿಂದ ಕೆಂಜಾರಿಗೆ ಆಗಮಿಸಿ ಮರುದಿನ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಇಬ್ಬರ ನಡುವೆ ಉಂಟಾದ ವಾಗ್ವಾದ ಆತನ ಮರ್ಮಾಂಗ ಕಳೆದುಕೊಳ್ಳುವರೆಗೆ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.