ಪತಿಯಿಂದ ದೂರವಾಗಿರುವ ಗೇಲ್ ಈಗ ವಾಷಿಂಗ್ಟನ್‌ನಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದಾಳೆ.

ಲಾಸ್ ಏಂಜಲೀಸ್(ಫೆ.08): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವ ವಿಚಾರ ವಯೋವೃದ್ಧ ದಂಪತಿಯ ವಿಚ್ಛೇದನಕ್ಕೆ ಕಾರಣವಾಗಿದೆ.

ಕ್ಯಾಲಿಫೋರ್ನಿಯಾದ ನಿವೃತ್ತ ಜೈಲು ಸಿಬ್ಬಂದಿ ಗೇಲ್ ಮ್ಯಾಕ್‌ಕೊರ್ಮಿಕ್ (73) ಚುನಾವಣೆಯಲ್ಲಿ ಟ್ರಂಪ್‌'ರನ್ನು ಬೆಂಬಲಿಸಿದ್ದಕ್ಕಾಗಿ 20 ವರ್ಷಗಳಿಂದ ಬಾಳ್ವೆ ನಡೆಸಿದ ಪತಿಗೆ ವಿಚ್ಛೇದನ ನೀಡಿದ್ದಾಳೆ.

ಆಕೆಯ ಪತಿ ಬಿಲ್ ಮ್ಯಾಕ್‌ಕೊರ್ಮಿಕ್ (77) ಚುನಾವಣೆಯಲ್ಲಿ ತಾನು ಟ್ರಂಪ್‌'ಗೆ ಮತಹಾಕುತ್ತಿರುವುದಾಗಿ ಸ್ನೇಹಿತರಿಗೆ ಹೇಳಿದ್ದನ್ನು ಕೇಳಿ ಆಘಾತಕ್ಕೆ ಒಳಗಾಗಿದ್ದಳು. ‘ಪತಿಯ ನಿಲುವಿನಿಂದ ನನಗೆ ಆಘಾತವಾಗಿತ್ತು. ಕೊನೆಗೆ ಅದು ವಿಚ್ಛೇದನ ಹಂತ ತಲುಪಿತು’ ಎಂದು ಗೇಲ್ ತಿಳಿಸಿದ್ದಾಳೆ. ಪತಿಯಿಂದ ದೂರವಾಗಿರುವ ಗೇಲ್ ಈಗ ವಾಷಿಂಗ್ಟನ್‌ನಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದಾಳೆ.