ತನ್ನ ಪತ್ನಿ ಮಗು​ವನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಇದರಿಂದ ತಾನು ಮಗು​ವಿನ ಪ್ರೀತಿಯಿಂದ ವಂಚಿತನಾಗಿರುವೆ ಎಂದು ಪತಿ ಈಗ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಈ ವೇಳೆ ಪರಸ್ಪರರು ದಾಖಲಿಸಿಕೊಂಡ ಕೇಸುಗಳನ್ನು ನೋಡಿ ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಬೆಂಗಳೂರು ಮೂಲದ ಈ ದಂಪತಿ ಪರಸ್ಪರ ಜಗಳವಾಡಿ ಎಷ್ಟು ಕೇಸು ಒಬ್ಬರ ಮೇಲೊಬ್ಬರು ಹಾಕಿಕೊಂಡಿ​ದ್ದಾರೆ ಎಂದರೆ, ಇದು ಸುಪ್ರೀಂ ಕೋರ್ಟ್‌'ಗೇ ಅಚ್ಚರಿ ತಂದಿದೆಯಂತೆ! ಹೌದು.. ಈ ದಂಪತಿ ಒಟ್ಟು 67 ಕೇಸುಗಳನ್ನು ಒಬ್ಬರ ಮೇಲೊಬ್ಬರು ಜಡಿದಿದ್ದಾರೆ.

ಅಮೆರಿಕ ನಾಗರಿಕತ್ವ ಹೊಂದಿರುವ ಟೆಕ್ಕಿಯೊಬ್ಬರು 2002​ರಲ್ಲಿ ಬೆಂಗಳೂರು ಮಹಿಳೆ​ಯನ್ನು ವಿವಾಹವಾಗಿದ್ದರು. 2009ರಲ್ಲಿ ಈ ದಂಪತಿಗೆ ಮಗು ಜನಿಸಿತು. ಆದರೆ ಬಳಿಕ ಇದ್ದಕ್ಕಿದ್ದಂತೆ ಇವರ ಸಂಬಂಧ ಹಳಸಿತು. ಗಂಡನು ಪತ್ನಿಯ ಮೇಲೆ 58 ದೂರುಗಳನ್ನು ದಾಖಲಿಸಿದರೆ, ಗಂಡನನ್ನು ಬಿಟ್ಟು ಮಗು​ವಿ​ನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿ​ರುವ ಪತ್ನಿ 9 ಪ್ರಕರಣ ದಾಖಲಿ​ಸಿದಳು. ಈ ಪ್ರಕರಣಗಳು ವರದಕ್ಷಿಣೆ ಕಿರುಕುಳ, ಗೃಹ ಹಿಂಸೆ, ಮಗುವಿನ ಹಕ್ಕು ಯಾರಿಗೆ ಸೇರಿದ್ದು.. ಎಂಬಿತ್ಯಾದಿಗಳ ಕುರಿತಾಗಿವೆ.

ತನ್ನ ಪತ್ನಿ ಮಗು​ವನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಇದರಿಂದ ತಾನು ಮಗು​ವಿನ ಪ್ರೀತಿಯಿಂದ ವಂಚಿತನಾಗಿರುವೆ ಎಂದು ಪತಿ ಈಗ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಈ ವೇಳೆ ಪರಸ್ಪರರು ದಾಖಲಿಸಿಕೊಂಡ ಕೇಸುಗಳನ್ನು ನೋಡಿ ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

epaper.kannadaprabha.in