ಸಾಮಾಜಿಕ ಜಾಲತಾಣ ವೇದಿಕೆ ಫೇಸ್‌'ಬುಕ್ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.

ವಾಷಿಂಗ್ಟನ್(ಅ.03): ಸಾಮಾಜಿಕ ಜಾಲತಾಣ ವೇದಿಕೆ ಫೇಸ್‌'ಬುಕ್ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಕಾರ್ಯ ಜನರನ್ನು ಒಂದುಗೂಡಿಸುವ ಬದಲು ಜನರನ್ನು ವಿಂಗಡಿಸುತ್ತಿರುವುದಕ್ಕೆ ತಮ್ಮನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಫೇಸ್‌'ಬುಕ್‌'ನಲ್ಲಿ ಪೋಸ್ಟ್ ಪ್ರಕಟಿಸಿರುವ ಜುಕರ್‌ಬರ್ಗ್, ‘ನಾನು ಈ ವರ್ಷ ಯಾರನ್ನಾದರೂ ನೋಯಿಸಿದ್ದರೆ, ನನ್ನನ್ನು ಕ್ಷಮಿಸಿಬಿಡಿ. ನನ್ನ ಕಾರ್ಯವನ್ನು ಜನರನ್ನು ಒಂದುಗೂಡಿಸಲು ಬಳಸುವ ಬದಲು ಜನರನ್ನು ವಿಂಗಡಿಸಲು ಬಳಸಲಾಗುತ್ತಿದೆ’ ಎಂದಿದ್ದಾರೆ.