ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್’ಬರ್ಗ್ ಕಂಪನಿಯಲ್ಲಿನ ತಮ್ಮ ಬೃಹತ್ ಮೊತ್ತದ ಷೇರುಗಳನ್ನು ಸಮಾಜ ಸೇವಾ ಕಾರ್ಯಗಳಿಗಾಗಿ ಮಾರಾಟ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

ವಾಷಿಂಗ್ಟನ್: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್’ಬರ್ಗ್ ಕಂಪನಿಯಲ್ಲಿನ ತಮ್ಮ ಬೃಹತ್ ಮೊತ್ತದ ಷೇರುಗಳನ್ನು ಸಮಾಜ ಸೇವಾ ಕಾರ್ಯಗಳಿಗಾಗಿ ಮಾರಾಟ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮಾನವೀಯ ಸೇವೆಯನ್ನು ಒದಗಿಸುವುದಕ್ಕಾಗಿ ಕಂಪನಿಯಲ್ಲಿನ ಸುಮಾರು 77850 ಕೋಟಿ ರು. ಮೌಲ್ಯದ ತಮ್ಮ ಷೇರುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ.

ಮುಂದಿನ 18 ತಿಂಗಳಲ್ಲಿ 35 ದಶಲಕ್ಷದಿಂದ 75 ದಶಲಕ್ಷ ಷೇರುಗಳನ್ನು ಮಾರಾಟ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.