ಬೆಂಗಳೂರು [ಆ.02]: ರಾಜ್ಯದಲ್ಲಿ ಮೈತ್ರಿ ರಚನೆ ಮಾಡಿಕೊಂಡ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ಉರುಳಿ ಅಧಿಕಾರ ಕಳೆದುಕೊಂಡು ಆತಂಕ ಎದುರಾದ ಬೆನ್ನಲ್ಲೇ  ಜೆಡಿಎಸ್ ಗೆ ಕೊಂಚ ಸಮಾಧಾನದ ಸಂಗತಿಯೊಂದು ಇಲ್ಲಿದೆ.

ಹಲವು ನಾಯಕರು ಕೈ ಕೊಟ್ಟು ಬಲ ಕಡಿಮೆಯಾದ ಜೆಡಿಎಸ್ ಗೆ ಇದೀಗ ಸವಿತ ಸಮಾಜದ ನೂರಾರು ಮುಖಂಡರು ಜೆಡಿಎಸ್ ಸೇರ್ಪಡೆಯಾಗಿ ಬಲ ತುಂಬಿದ್ದಾರೆ. 

ವಿಶ್ವನಾಥ್‌ಗೆ ಪಾಠ ಕಲಿಸಲು ದೇವೇಗೌಡ್ರಿಂದ ಮಾಸ್ಟರ್ ಪ್ಲಾನ್!

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ನೇತೃತ್ವದಲ್ಲಿ ನೂರಾರು ಮುಖಂಡರು ಪಕ್ಷ ಸೇರ್ಪಡೆಯಾಗಿದ್ದಾರೆ. ಜೆಪಿ ನಗರದ ಪ್ರಧಾನಿ ಕಚೇರಿ ಆವರಣದಲ್ಲಿ ಅಧಿಕೃತವಾಗಿ ಪಕ್ಷ ಸೇರಿದ್ದಾರೆ. 

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ : JDS ನಲ್ಲಿ ಊಹಿಸದ ಬೆಳವಣಿಗೆ

 ರಾಜ್ಯದಲ್ಲಿ ಶೀಘ್ರವೇ ಶಾಸಕರು ಅನರ್ಹಗೊಂಡ  17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇಲ್ಲಿ ನಡೆಯುವ ಚುನಾವಣೆಯಲ್ಲಿ ಏಕಾಂಗಿಯಾಗಿ ಪಕ್ಷ ಸ್ಪರ್ಧೆ ಮಾಡುತ್ತಿದ್ದು, ಸವಿತಾ ಸಮಾಜನ ಬೆಂಬಲ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ.