ಈ ವರ್ಷದ ಚಳಿಗಾಲದ ಅಧಿವೇಶದ ಅಂಗವಾಗಿ ನಡೆದ 13 ಕಲಾಪಗಳಲ್ಲಿ ಕೇವಲ ಒಮ್ಮೆಯಷ್ಟೇ ಸಚಿನ್ ಭಾಗಿಯಾಗಿದ್ದಾರೆ.
ಚಕ್ಕರ್ ಹೊಡೆಯುವುದರಲ್ಲೂ ಮಾಸ್ಟರ್'ಬ್ಲಾಸ್ಟರ್'ಗೆ ಮೊದಲ ಸ್ಥಾನ...!
ಕಲಾಪಗಳಿಗೆ ಸತತವಾಗಿ ಗೈರಾಗುತ್ತಿರುವ ಸಂಸದರ ಪಟ್ಟಿಯೊಂದನ್ನು ‘ಡೈಲಿ ಮೇಲ್’ ಪ್ರಕಟಿಸಿದ್ದು, ಬ್ಯಾಟಿಂಗ್ ಮಾಂತ್ರಿಕ ಹಾಗೂ ರಾಜ್ಯಸಭಾ ಸಂಸದ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ!
ಪಟ್ಟಿಯಲ್ಲಿರುವಂತೆ, ಈ ವರ್ಷದ ಚಳಿಗಾಲದ ಅಧಿವೇಶದ ಅಂಗವಾಗಿ ನಡೆದ 13 ಕಲಾಪಗಳಲ್ಲಿ ಕೇವಲ ಒಮ್ಮೆಯಷ್ಟೇ ಸಚಿನ್ ಭಾಗಿಯಾಗಿದ್ದರೆ, ಕಳೆದ ಮುಂಗಾರು ಅವೇಶನದ 20 ಕಲಾಪಗಳಲ್ಲಿ ಅವರು ಕೇವಲ 3ರಲ್ಲಿ ಮಾತ್ರ ಭಾಗಿಯಾಗಿದ್ದಾರೆ.
ಇನ್ನೂ ನಟ ಚಿರಂಜೀವಿ ಮತ್ತು ರೇಖಾ ಕೇವಲ ಒಮ್ಮೆಯಷ್ಟೇ ಹಾಜರಾಗಿದ್ದಾರೆ!
