Asianet Suvarna News Asianet Suvarna News

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಿಜೆಪಿ ಜನ ಪ್ರತಿನಿಧಿಗಳೇ ಹೆಚ್ಚು

ಬಿಜೆಪಿಯ ಅತಿಹೆಚ್ಚು ಜನಪ್ರತಿನಿಧಿಗಳು ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶ ಪ್ರಜಾಪ್ರಭುತ್ವ ಸುಧಾರಣೆ ಸಂಘಟನೆ(ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಎಂಬ ಸಂಸ್ಥೆಯ ವರದಿಗಳಿಂದ ಬಯಲಾಗಿದೆ.

Many bjp representatives are in sexual harassment cases

ನವದೆಹಲಿ: ಬಿಜೆಪಿಯ ಅತಿಹೆಚ್ಚು ಜನಪ್ರತಿನಿಧಿಗಳು ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶ ಪ್ರಜಾಪ್ರಭುತ್ವ ಸುಧಾರಣೆ ಸಂಘಟನೆ(ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಎಂಬ ಸಂಸ್ಥೆಯ ವರದಿಗಳಿಂದ ಬಯಲಾಗಿದೆ.

ಎಲ್ಲ ಸಂಸದರು ಮತ್ತು ಶಾಸಕರು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ 4896 ಅಫಿಡವಿಟ್‌ಗಳಲ್ಲಿ 4845 ಅಫಿಡವಿಟ್‌ಗಳನ್ನು ಈ ಎರಡು ಸಂಸ್ಥೆಗಳು ವಿಶ್ಲೇಷಣೆ ಮಾಡಿದ್ದು, ಇದರಲ್ಲಿ 1580 ಶಾಸಕರು ಮತ್ತು ಸಂಸದರು ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂಬುದನ್ನು ಪ್ರಮಾಣಪತ್ರದಲ್ಲಿ ದೃಢಪಡಿಸಿದ್ದಾರೆ. ಅಲ್ಲದೆ, ಕಳೆದ ಐದು ವರ್ಷಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ 47 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿದ್ದರೆ, ಬಿಎಸ್‌ಪಿ 35 ಅಭ್ಯರ್ಥಿಗಳಿಗೆ ಮತ್ತು ಕಾಂಗ್ರೆಸ್‌ 24 ಮಂದಿಗೆ ಟಿಕೆಟ್‌ ನೀಡಿದೆ ಎಂಬುದಾಗಿ ಆರೋಪಿಸಲಾಗಿದೆ.

ಮಹಿಳಾ ದೌರ್ಜನ್ಯ ಸಂಬಂಧಿತ ಪ್ರಕರಣಗಳನ್ನು ಎದುರಿಸುತ್ತಿದ್ದೇವೆ ಎಂಬುದಾಗಿ 48 ಮಂದಿ ಜನಪ್ರತಿನಿಧಿಗಳು ಸ್ವತಃ ತಾವೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾದ ಅಫಿಡೇವಿಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಇವರಲ್ಲಿ 12 ಮಂದಿ ಬಿಜೆಪಿ ಶಾಸಕ/ಸಂಸದರು, 7 ಶಿವಸೇನೆ ಪಕ್ಷದ ಶಾಸಕರು ಮತ್ತು ಸಂಸದರು ಮತ್ತು 6 ಮಂದಿ ತೃಣಮೂಲ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಸೇರಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂಥ ಜನಪ್ರತಿನಿಧಿಗಳ ತಡೆಗಾಗಿ ಗಂಭೀರ ಆರೋಪ ಮತ್ತು ಗಂಭೀರ ಪ್ರಕರಣಗಳ ಹಿನ್ನೆಲೆಯುಳ್ಳವರನ್ನು ಚುನಾವಣಾ ಕಣದಿಂದ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಟಿಕೆಟ್‌ ನೀಡುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೆಲವು ನಿರ್ದಿಷ್ಟಮಾನದಂಡಗಳನ್ನು ಗೊತ್ತುಪಡಿಸಬೇಕು ಎಂದು ಎಡಿಆರ್‌ ಒತ್ತಾಯ ಮಾಡಿದೆ.

Follow Us:
Download App:
  • android
  • ios