ನಟ ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಪ್ರೊಟೊಕಾಲ್ ಪ್ರಕಾರ ಹಿರಿಯರು ಹಾಗೂ ಗಣ್ಯರನ್ನು ಕರೆಯಲಾಗುತ್ತಿತ್ತು. ಈ ವೇಳೆ ಕೆಲವು ನಟರು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದರು.
ಬೆಂಗಳೂರು : ನಟ ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಪ್ರೊಟೊಕಾಲ್ ಪ್ರಕಾರ ಹಿರಿಯರು ಹಾಗೂ ಗಣ್ಯರನ್ನು ಕರೆಯಲಾಗುತ್ತಿತ್ತು. ಈ ವೇಳೆ ಪಟ್ಟಿಯಲ್ಲಿ ಹಠಾತನೆ ಮುಖ್ಯಮಂತ್ರಿ ಪುತ್ರ ನಿಖಿಲ್ ಅವರ ಹೆಸರು ಕರೆದು ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
ಬಳಿಕ ವಿಧಿ ವಿಧಾನ ಪೂರೈಸಲು ಸಮಯವಕಾಶ ಬೇಕು ಎಂಬ ಕಾರಣ ನೀಡಿ ಕೆಲವು ಖ್ಯಾತ ನಟರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದೆ ಸಚಿವ ಡಿ.ಕೆ. ಶಿವಕುಮಾರ್ ತಡೆದರು. ಇದರಿಂದ ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಬೇಕಾದವರಿಗೆ ಬಿಟ್ಟರೆ ಹೇಗೆ ಎಂದು ಪಾರ್ಥಿವ ಶರೀರದ ಎದುರೇ ಗಲಾಟೆ ಮಾಡಿದರು.
ಹೀಗಾಗಿ ಮತ್ತೊಂದು ಸುತ್ತು ಎಲ್ಲಾ ಕಲಾವಿದರನ್ನು ಅಂಬರೀಷ್ ಅವರನ್ನು ಪ್ರದಕ್ಷಿಣೆ ಮಾಡಿ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.
