ಇನ್ಫೋಟೆಕ್ ಎಂಬ ಕಂಪನಿ ಜ.16 ರಿಂದ ಫೆ.6ರ ವರೆಗೆ ಪರಿಶೀಲನೆ ನಡೆಸಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಮತ್ತೆ ಆರಂಭವಾಗಲು ತೆರೆಮರೆ ಕಸರತ್ತು ಶುರು ಮಾಡಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಮಂತ್ರಿಮಾಲ್'ನ ಆಡಳಿತ ಮಂಡಳಿ ಸಂಪೂರ್ಣ ಕಟ್ಟಡ ಪರಿಶೀಲನಾ ವರದಿಯನ್ನ ಸಲ್ಲಿಕೆ ಮಾಡಿದ್ದು, ಆ ವರದಿ ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
ಮಂತ್ರಿ ಮಾಲ್ ಫೆ.12ರಂದು ಸಲ್ಲಿಕೆ ಮಾಡಿರೋ ವರದಿಯಲ್ಲಿ ಕಟ್ಟಡದ ಸಾರ್ಮಥ್ಯವನ್ನು ಪರಿಶೀಲನೆ ನಡೆಸಿರುವ ಬಗ್ಗೆ ಉಲ್ಲೇಖವಾಗಿದೆ. ಇನ್ಫೋಟೆಕ್ ಎಂಬ ಕಂಪನಿ ಜ.16 ರಿಂದ ಫೆ.6ರ ವರೆಗೆ ಪರಿಶೀಲನೆ ನಡೆಸಿದೆ. ಬಿಬಿಎಂಪಿ ಹಾಗೂ ತಜ್ಞರ ತಂಡ ನಡೆಸಿರೋ ಪರಿಶೀಲನೆ ಆಧರಿಸಿ ನಡೆದಿರುವ ವರದಿಯಲ್ಲಿ ಕುಸಿತವಾದ ಗೋಡೆಯ ಸಮೀಪವಿದ್ದ ಕೊಳಚೆ ನೀರು ಹರಿಯುವ ಪೈಪ್ ಜಾಗವನ್ನ ಬದಲಾಯಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
21 ಭಾವಚಿತ್ರಗಳ ಸಹಿತ 71 ವರದಿ ನೀಡಲಾಗಿದ್ದು, ಬಿಬಿಎಂಪಿ ವರದಿಯನ್ನು ಒಪ್ಪಿ ಮತ್ತೊಮ್ಮೆ ಮಂತ್ರಿಮಾಲ್ ಗೋಡೆ ಕುಸಿತ ಸ್ಥಳವನ್ನು ಪರಿಶೀಲಿಸಿ ಮಾಲ್ ಆರಂಭಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದೆ.
