ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಯೋಜನೆ’ಯ ಮೂರನೇ ಹಂತದ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಂದಿರ ಸೇರಿದಂತೆ ಒಟ್ಟು 10 ಸಾಂಪ್ರದಾಯಿಕ ಕ್ಷೇತ್ರಗಳು ಆಯ್ಕೆಯಾಗಿವೆ.  

ನವದೆಹಲಿ (ಜೂ. 13): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಯೋಜನೆ’ಯ ಮೂರನೇ ಹಂತದ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಂದಿರ ಸೇರಿದಂತೆ ಒಟ್ಟು 10 ಸಾಂಪ್ರದಾಯಿಕ ಕ್ಷೇತ್ರಗಳು ಆಯ್ಕೆಯಾಗಿವೆ. 

ಈ ಮೂಲಕ ಈಗಾಗಲೇ ಸ್ವಚ್ಛ ಭಾರತದ 1 ಮತ್ತು 2ನೇ ಹಂತದಲ್ಲಿ ನೈರ್ಮಲ್ಯೀಕರಣಕ್ಕೆ ಒಳಗಾಗುತ್ತಿರುವ 20 ಸಾಂಪ್ರದಾಯಿಕ ಪ್ರದೇಶಗಳ ಪಟ್ಟಿಗೆ ಈ ಸಾಂಪ್ರದಾಯಿಕ ಕ್ಷೇತ್ರಗಳು ಸಹ ಸೇರ್ಪಡೆಯಾಗಿವೆ. ಸ್ವಚ್ಛ ಭಾರತದ ಮೂರನೇ ಹಂತದ ಯೋಜನೆಗೆ ಕೇರಳದ ಶಬರಿ ಮಲೆ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಹಜದ್ರ್ವಾರಿ ಪ್ಯಾಲೇಸ್‌, ಹರ್ಯಾಣದ ಕುರುಕ್ಷೇತ್ರದ ಬ್ರಹ್ಮ ಸರೋವರ ಮಂದಿರ, ಉತ್ತರ ಪ್ರದೇಶದ ವಿದೂರ್‌ ಕುಟಿ, ಉತ್ತರಾಖಂಡ್‌ನ ಮನ ಗ್ರಾಮ, ಜಮ್ಮು-ಕಾಶ್ಮೀರದ ಪಾಂಗಾಂಗ್‌ ಕೆರೆ, ಉತ್ತರ ಪ್ರದೇಶದ ನಾಗವಸುಕಿ ಮಂದಿರ, ಮಣಿಪುರದ ಇಮಾ ಕೀಥಲ್‌ ಮಾರ್ಕೆಟ್‌ ಮತ್ತು ಉತ್ತರಾಖಂಡ್‌ನ ಕನ್ವಾಶ್ರಮಗಳು ಆಯ್ಕೆಯಾಗಿವೆ.