ಇಂದು ಸಂಜೆ ಲಖನೌದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು,  ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತೆ. ಇದಾದ ಮೇಲೆ ಭಾನುವಾರ ಸಿಎಂ ಪದಗ್ರಹಣ ನಡೆಯಲಿದೆ.

ಲಖನೌ(ಮಾ.18): ಉತ್ತರ ಪ್ರದೇಶದಲ್ಲಿ ಬೃಹತ್ ಜಯಭೇರಿ ಬಾರಿಸಿದ ಬಿಜೆಪಿ ನೂತನ ಸಾರಥಿಗಾಗಿ ಹುಡುಕಾಟ ನಡೆಸಿದೆ. ಉತ್ತರ ಪ್ರದೇಶದ ಅಳ್ವಿಕೆಗೆ ಶುದ್ಧಹಸ್ತದ ವ್ಯಕ್ತಿಯ ಆಯ್ಕೆ ಅನಿವಾರ್ಯವಾಗಿದೆ. ಹಾಗಾಗಿ ಕೇಂದ್ರ ಟೆಲಿಕಾಂ ಸಚಿವ ಮನೋಜ್‌ ಸಿನ್ಹಾ ಅವ್ರನ್ನು ಮೋದಿ ಹಾಗೂ ಅಮಿತ್ ಷಾ ಆಯ್ಕೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಇಂದು ಸಂಜೆ ಲಖನೌದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತೆ. ಇದಾದ ಮೇಲೆ ಭಾನುವಾರ ಸಿಎಂ ಪದಗ್ರಹಣ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಭಾವಿತವಾದುದು ಜಾತಿವಾರು ರಾಜಕಾರಣ. ಆದರೆ ಭೂಮಿಹಾರ ಸಮುದಾಯಕ್ಕೆ ಸೇರಿದ ಮನೋಜ್ ಸಿನ್ಹಾ ಆಯ್ಕೆ ಮೂಲಕ ಜಾತಿ-ವರ್ಗಗಳ ಮತ ಭೇದಕ್ಕೆ ಮೋದಿ ಬ್ರೇಕ್ ಹಾಕಲಿದ್ದಾರೆ. ಈ ಮೂಲಕ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಮಾತನ್ನು ಸಾಕಾರಗೊಳಿಸಲು ಮೋದಿ ಮುಂದಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಚುಕ್ಕಾಣಿ ಹಿಡಿಯಲು ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಮೌರ್ಯ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೆಸರು ಕೇಳಿ ಬಂದಿತ್ತು.