ಹೆಚ್ಚಿನ ಚಿಕಿತ್ಸೆಗೆ ಮನೋಹರ್ ಪರ್ರಿಕರ್ ವಿದೇಶಕ್ಕೆ

Manohar Parrikar like to undergo treatment in US  sets up committee to overlook Goa governance
Highlights

ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮನೋಹರ್ ಪರ್ರಿಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.  ಇಂದು ಸಂಜೆ ಖಾಸಗಿ ವಿಮಾನದಲ್ಲಿ ಮನೊಹರ್ ಪರ್ರಿಕರ್ ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. 

ಬೆಂಗಳೂರು (ಮಾ. 05): ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮನೋಹರ್ ಪರ್ರಿಕರ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ.  ಇಂದು ಸಂಜೆ ಖಾಸಗಿ ವಿಮಾನದಲ್ಲಿ ಮನೊಹರ್ ಪರ್ರಿಕರ್ ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. 

ಅವರು ಚೇತರಿಸಿಕೊಳ್ಳುವವರೆಗೆ ಅವರ ಅನುಪಸ್ಥಿತಿಯಲ್ಲಿ ಆಡಳಿತ ನಡೆಸಲು ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಬಿಜೆಪಿಯ ಫ್ರಾನ್ಸಿಸ್ ಡಿಸೋಜಾ, ಎಂಜಿಪಿ ಪಕ್ಷದ ಸುದಿನ್ ಧವಲೀಕರ್ ಹಾಗೂ ಗೋವಾ ಫಾರ್ವರ್ಡ್’ನ ವಿಜಯ್ ಸರ್ದೇಸಾಯಿ ಈ ಸಮಿತಿಯಲ್ಲಿದ್ದಾರೆ. ಇಂದು ಸಂಜೆ ಹೊರಡುವ ಮುನ್ನ ಮನೋಹರ್ ಪರ್ರಿಕರ್ ಅಧಿಕೃತಗೊಳಿಸಲಿದ್ದಾರೆ. 

ಮುಖ್ಯಮಂತ್ರಿ ಪರ್ರಿಕರ್ ಕೈಗಾರಿಕೆ, ಶಿಕ್ಷಣ, ಪರಿಸರ, ಹಣಕಾಸು ಮತ್ತು ಗೃಹ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತುರ್ತು ಕೆಲಸವಿದ್ದರೆ ತ್ರಿ ಸದಸ್ಯ ಸಮಿತಿ ಇದನ್ನು ನಿಭಾಯಿಸಲಿದೆ.  

loader