ನವದೆಹಲಿ(ಮೇ.27): ಪ್ರಧಾನಿ ನರೇಂದ್ರ ಮೋದಿ ಇಂದು ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದ 44ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಭಾರತೀಯ ನೌಕಯಾನ ಐನ್‌ಎಸ್‌ವಿಯ ಆರು ಮಂದಿ ಮಹಿಳಾ ತಂಡವನ್ನು ಮೋದಿ ಅಭಿನಂದಿಸಿದ್ದಾರೆ.

ಐನ್‌ಎಸ್‌ವಿಯ ಆರು ಮಂದಿ ತರುಣ ಮಹಿಳಾ ತಂಡ 254 ದಿನಗಳಲ್ಲಿ 22 ಸಾವಿರ ಮೈಲು ದೂರು ಕ್ರಮಿಸಿ ಇಡೀ ಜಗತ್ತನೇ ಸುತ್ತಿ ದಾಖಲೆ ಬರೆದಿತ್ತು. ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದ ಮಕ್ಕಳಾದ ಈ ಆರು ಮಂದಿ 254 ದಿನಗಳಲ್ಲಿ ಇಡೀ ವಿಶ್ವ ಸುತ್ತುವ ಮೂಲಕ ನೌಕ ಕ್ಷೇತ್ರದಲ್ಲಿ ಪರಾಕ್ರಮ ಮೆರೆದಿದ್ದಾರೆ ಎಂದು ಪ್ರಶಂಸಿದ್ದಾರೆ.

ಜಗತ್ತಿನ ಪ್ರಮುಖ ಸಮುದ್ರಗಳಲ್ಲಿ ಹಡುಗು ಮೂಲಕವೇ 22 ಸಾವಿರ ಮೈಲಿ ಕ್ರಮಿಸಿದ್ದ ಈ ತಂಡ ಮೇ 21 ರಂದು ಭಾರತಕ್ಕೆ ವಾಪಾಸ್ಸಾಗಿತ್ತು. ನೌಕಾ ಪಡೆ ಆಡ್ಮೀರಲ್ ಸುನೀಲ್ ಲಾಂಬಾ ಅವರೊಂದಿಗೆ ಎಲ್ಲಾ ಮಹಿಳಾ ಸಿಬ್ಬಂದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬರಮಾಡಿಕೊಂಡಿದ್ದರು. ಆಸ್ಟ್ರೇಲಿಯಾದ ಪ್ರಿಮ್ಯಾಂಟಲ್,  ನ್ಯೂಜಿಲ್ಯಾಂಡ್ ನ ಲೈಟೆಲ್ಟನ್,  ಪೊಲ್ಕ್ ಲ್ಯಾಂಡ್ಸ್ ನ  ಸ್ಟ್ಯಾನ್ಲಿ,  ದಕ್ಷಿಣ ಆಫ್ರಿಕಾದ  ಕೇಪ್ ಟೌನ್ ಬಂದರುಗಳಲ್ಲಿ ನಿಲುಗಡೆ ಅವಕಾಶ ಕಲ್ಪಿಸಲಾಗಿತ್ತು. 

ಲೆಪ್ಟಿನೆಂಟ್ ಕಮಾಂಡರ್ ವಾರ್ತಿಕಾ ಜೋಷಿ ನೇತೃತ್ವದ  ತಂಡದಲ್ಲಿ, ಲೆಪ್ಟಿನೆಂಟ್ ಪಿ, ಸ್ವಾತಿ, ಪ್ರತಿಭಾ ಜಮ್ ವಾಲಾ, ವಿಜಯ್ ದೇವಿ, ಬಿ. ಐಶ್ವರ್ಯ ಮತ್ತು ಸಬ್ ಲೆಪ್ಟಿನೆಂಟ್ ಪಾಯಲ್ ಗುಪ್ತಾ ಪರ್ಯಟಣೆ ಕೈಗೊಂಡಿದ್ದರು.