‘ಮೋದಿ ಅವರು ಪ್ರತಿ ತಿಂಗಳಾಂತ್ಯಕ್ಕೆ 1 ತಾಸು ರೇಡಿಯೋ ಭಾಷಣ ಮಾಡುತ್ತಾರೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟೆ. ಇದು ಜನರೊಂದಿಗೆ ಸಂಪರ್ಕ ಸಾಧಿಸಲು ಅವರು ಹಾತೊರೆಯುವ ಸಂಕೇತ' ಎಂದು ಮುನ್ನುಡಿಯಲ್ಲಿ ಅಬೆ ಬರೆದಿದ್ದಾರೆ.ಇದೇ ವೇಳೆ ಪುಸ್ತಕದಲ್ಲಿ ಮೋದಿ ಅವರು ತಾನೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ.
ನವದೆಹಲಿ: ಮೋದಿ ಅವರು ಆಕಾಶವಾಣಿಯಲ್ಲಿ ಪ್ರತಿ ತಿಂಗಳು ಮಾಡುವ ರೇಡಿಯೋ ಭಾಷಣವನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. ಸರ್ಕಾರಕ್ಕೆ 3 ವರ್ಷ ತುಂಬಲಿರುವ ಮುನ್ನಾ ದಿನ ಅಂದರೆ ಮೇ 25ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಿಡುಗಡೆ ಮಾಡಲಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್' ಪುಸ್ತಕದ ಮುನ್ನುಡಿ ಬರೆದಿದ್ದಾರೆ.

‘ಮೋದಿ ಅವರು ಪ್ರತಿ ತಿಂಗಳಾಂತ್ಯಕ್ಕೆ 1 ತಾಸು ರೇಡಿಯೋ ಭಾಷಣ ಮಾಡುತ್ತಾರೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟೆ. ಇದು ಜನರೊಂದಿಗೆ ಸಂಪರ್ಕ ಸಾಧಿಸಲು ಅವರು ಹಾತೊರೆಯುವ ಸಂಕೇತ' ಎಂದು ಮುನ್ನುಡಿಯಲ್ಲಿ ಅಬೆ ಬರೆದಿದ್ದಾರೆ.
ಇದೇ ವೇಳೆ ಪುಸ್ತಕದಲ್ಲಿ ಮೋದಿ ಅವರು ತಾನೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ.
‘ಅಮೆರಿಕದಲ್ಲಿನ ಅಧ್ಯಕ್ಷರು ರೇಡಿಯೋ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮಾರ್ಟಿನ್ ಲೂಥರ್ ಕಿಂಗ್ ಅವರ ‘ಐ ಹ್ಯಾವ್ ಎ ಡ್ರೀಮ್' ಭಾಷಣ ರೇಡಿಯೋದಿಂದಲೇ ಖ್ಯಾತಿ ಹೊಂದಿತು. ಇತರ ಮಾಧ್ಯಮಗಳಿಗಿಂತ ಹೆಚ್ಚು ಬದಲಾವಣೆ ಸೃಷ್ಟಿಸುವ ಶಕ್ತಿ ರೇಡಿಯೋಗಿದೆ' ಎಂದು ಮೋದಿ ಹೇಳಿದ್ದಾರೆ.
