ಸಣ್ಣ ಬ್ರೇಕ್ ಬಳಿಕ ಮತ್ತೆ ಸಂಸತ್ತಿಗೆ ಮಾಜಿ ಪ್ರಧಾನಿ ಎಂಟ್ರಿ| ರಾಜಸ್ಥಾನ ರಾಜ್ಯಸಭೆಗೆ ಡಾ. ಮನಮೋಹನ್ ಸಿಂಗ್ ಅವಿರೋಧ ಆಯ್ಕೆ| ಡಾ. ಸಿಂಗ್ ಎಂಟ್ರಿಯಿಂದ ಕಾಂಗ್ರೆಸ್‌ಗೆ ಮತ್ತೆ ಬಲ

ನವದೆಹಲಿ[ಆ.19]: ಮಾಜಿ ಪ್ರಧಾನಿ ಕಾಂಗ್ರೆಸ್ ಹಿರಿಯ ನಾಯಕ ಮನಮೋಹನ್ ಸಿಂಗ್ ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದಿಂದ ಸ್ಪರ್ಧಿಸಿದ್ದ ಡಾ. ಸಿಂಗ್ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ಮನಮೋಹನ್ ಸಿಂಗ್ ರಿಗೆ ಆಯ್ಕೆಯಾಗಿರುವ ಪ್ರಮಾಣ ಪತ್ರವನ್ನು ನೀಡಿದ್ದಾರೆ. 

ಡಾ. ಮನಮೋಹನ್ ಸಿಂಗ್ ರಾಜಸ್ಥಾನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸ್ಥಾನದಲ್ಲಿ ಈ ಹಿಂದೆ, ಬಿಜೆಪಿಯ ರಾಜಸ್ಥಾನ ಅಧ್ಯಕ್ಷ ಮದನ್ ಲಾಲ್ ಸೈನಿ ಸಂಸದರಾಗಿದ್ದರು. ಆದರೆ ಅವರ ಆಕಸ್ಮಿಕ ನಿಧನದಿಂದ ಈ ಸ್ಥಾನ ತೆರವಾಗಿತ್ತು. 

ಕಾಂಗ್ರೆಸ್‌ಗೆ ಗುಡ್ ನ್ಯೂಸ್, ಡಾ. ಸಿಂಗ್ ರಾಜ್ಯಸಭೆ ಪ್ರವೇಶ ಬಹುತೇಕ ಖಚಿತ!

ಡಾ. ಮನಮೋಹನ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಶುಭ ಕೋರಿದ್ದಾರೆ. 'ಡಾ. ಸಿಂಗ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದು ಇಡೀ ರಾಜ್ಯಕ್ಕೆ ಹೆಮ್ಮೆ. ಅವರ ಅದ್ಭುತ ಜ್ಞಾನ ಹಾಗೂ ಅನುಭವದಿಂದ ರಾಜಸ್ಥಾನಕ್ಕೆ ಬಹಳಷ್ಟು ಲಾಭವಾಗಲಿದೆ' ಎಂದಿದ್ದಾರೆ.

Scroll to load tweet…
Scroll to load tweet…

ಕಾಂಗ್ರೆಸ್ ಮನಮೋಹನ್ ಸಿಂಗ್ ರನ್ನು ತನ್ನ ಸದಸ್ಯನಾಗಿ ಘೋಷಿಸಿದಾಗ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಹೀಗಾಗಿ ಡಾ. ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮನಮೋಹನ್ ಸಿಂಗ್ ಆಯ್ಕೆಯಿಂದ ರಾಜ್ಯಸಭೆಯಕಲ್ಲಿ ಕಾಂಗ್ರೆಸ್ ಸದಸ್ಯರ ಬಲ ಹೆಚ್ಚಾಗಿದೆ.