ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತದಲ್ಲಿ ಇಲ್ಲದ ರಾಜ್ಯಗಳಿಗೆ ತೆರಳಿದಾಗ ಹೆಚ್ಚು ಸಂಯಮವನ್ನು ವಹಿಸಬೇಕು ಎಂದಿದ್ದಾರೆ. 

ನವದೆಹಲಿ : ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಸಂಯಮ ವಹಿಸಬೇಕು. ಅವರು ಇತರರಿಗೆ ಮಾದರಿಯಾಗಿರಬೇಕು ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪ್ರಧಾನಿಗೆ ಸಲಹೆಯನ್ನು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯಲ್ಲಿ ನಡೆದ ಮನೀಶ್ ತಿವಾರಿ ಅವರ ಪುಸ್ತಕ ಬಿಡುಗಡೆ ಸಮಾರಂಭವದಲ್ಲಿ ಮಾತನಾಡಿದ ಅವರು ಪ್ರಧಾನಿಯಾಗಿ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ಮೋದಿ ಅವರು ನಿರ್ವಹಿಸಬೇಕು ಎಂದು ಹೇಳಿದ್ದಾರೆ. 

ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಿಗೆ ತೆರಳಿದ ವೇಳೆ ಮೋದಿ ವರ್ತನೆ ಒಂದು ರೀತಿಯಲ್ಲಿದ್ದರೆ, ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಅವರು ತಾಳ್ಮೆಯಿಂದ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ. 

ದೇಶದ ಜನತೆಗೆ ಮಾದರಿಯಾಗುವಂತಹ ನಡೆಯನ್ನು ಹೊಂದಿದ್ದಾಗ ಮಾತ್ರ ಓರ್ವ ವ್ಯಕ್ತಿ ಪ್ರಧಾನಿಯಾಗಬಲ್ಲ. ಆದ್ದರಿಂದ ನರೇಂದ್ರ ಮೋದಿ ತಾಳ್ಮೆ ರೂಢಿಸಿಕೊಳ್ಳಬೇಕು ಎಂದರು.