ಸರ ಕಳೆದುಕೊಂಡರು ತಮ್ಮನ್ನು ಸಂಪರ್ಕಿಸುವಂತೆ fb ಯಲ್ಲಿ ಯುವಕ ಮನವಿ ಮಾಡಿಕೊಂಡಿದ್ದ. ಇದರಂತೆ ಪ್ರೇಮಾ ಅವರಿಗೆ ಆ ಸರವನ್ನು ನೀಡಿರುವುದಾಗಿ ತಿಳಿಸಿದ್ದಾನೆ.

ಮಂಡ್ಯ(ಮಾ.11): ರಸ್ತೆ ಮಧ್ಯೆ ಸಿಕ್ಕ‌ ಮಾಂಗಲ್ಯ ಸರವನ್ನು ಗ್ರಾ.ಪಂ. ಸದಸ್ಯನೊಬ್ಬ ಸಾಮಾಜಿಕ ಜಾಲತಾಣವಾದ ಫೇಸ್'ಬುಕ್ ಮೂಲಕ ಹುಡುಕಿ ಮಾಲೀಕರಿಗೆ ನೀಡಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ ಕಳೆದುಕೊಂಡರು ತಮ್ಮನ್ನು ಸಂಪರ್ಕಿಸುವಂತೆ fb ಯಲ್ಲಿ ಯುವಕ ಮನವಿ ಮಾಡಿಕೊಂಡಿದ್ದ. ಇದರಂತೆ ಪ್ರೇಮಾ ಅವರಿಗೆ ಆ ಸರವನ್ನು ನೀಡಿರುವುದಾಗಿ ತಿಳಿಸಿದ್ದಾನೆ.

ಮಂಡ್ಯದ ಮಳವಳ್ಳಿ ತಾಲೂಕಿನ ಕಾನೂನಕೊಪ್ಪಲು ಗ್ರಾ.ಪಂ. ಮಹದೇವು ಎಂಬುವವರಿಗೆ 60 ಗ್ರಾಂ ತೂಕ ಚಿನ್ನದ ಸರ ಸಿಕ್ಕಿತ್ತು. ಸೂಕ್ತ ದಾಖಲಾತಿ ಒದಗಿಸಿ ಮಾಂಗಲ್ಯ ಸರ ಪಡೆಯುವಂತೆ ಯುವಕ ಸಲಹೆ ನೀಡಿದ್ದರು. ಗ್ರಾ.ಪಂ. ಸದಸ್ಯನ‌ ಈ ಪ್ರಾಮಾಣಿಕತೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರಿಗೆ ತಲುಪಿಸಿದರೆ ಅದು ಯಾರಿಗೂ ಸೇರುತ್ತೆ ಎಂದು ಸಾಮಾಜಿಕ ಜಾಲತಾಣದ ಮೊರೆ ಹೋಗಿರುವುದಾಗಿ ಫೇಸ್'ಬುಕ್'ನಲ್ಲಿ ಬರೆದುಕೊಂಡಿದ್ದರು.