ಮಂಗಳೂರು: ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಮರು

Mangaluru:  Muslim men help Hindu man perform sister’s last rites
Highlights

ಮಾನವೀಯತೆ ಧರ್ಮಕ್ಕೂ ಮೀರಿದ್ದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅನಾಥ ಹೆಣವಾಗಿದ್ದ ಹಿಂದೂ ಮಹಿಳೆಯ ಅಂತಿಮ ಸಂಸ್ಕಾರವನ್ನು ಮುಸ್ಲಿಂಮರು ಒಂದುಗೂಡಿ ನೆರವೇರಿಸಿದ್ದಾರೆ. ಇದು ದೂರದಲ್ಲಿ ಎಲ್ಲೋ ನಡೆದಿರುವ ಸುದ್ದಿಯಲ್ಲ.. ಕೋಮು ಸಂಘರ್ಷಕ್ಕೆ ಆಗಾಗ ಸುದ್ದಿಗೆ ಬರುವ ಮಂಗಳೂರಿನಲ್ಲಿಯೇ ಇಂಥದ್ದೊಂದು ಮಾದರಿ ಕೆಲಸವೂ ನಡೆದಿದೆ.

ಮಂಗಳೂರು [ಜೂನ್ 19] ಮಾನವೀಯತೆ ಧರ್ಮಕ್ಕೂ ಮೀರಿದ್ದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅನಾಥ ಹೆಣವಾಗಿದ್ದ ಹಿಂದೂ ಮಹಿಳೆಯ ಅಂತಿಮ ಸಂಸ್ಕಾರವನ್ನು ಮುಸ್ಲಿಂಮರು ಒಂದುಗೂಡಿ ನೆರವೇರಿಸಿದ್ದಾರೆ. ಇದು ದೂರದಲ್ಲಿ ಎಲ್ಲೋ ನಡೆದಿರುವ ಸುದ್ದಿಯಲ್ಲ.. ಕೋಮು ಸಂಘರ್ಷಕ್ಕೆ ಆಗಾಗ ಸುದ್ದಿಗೆ ಬರುವ ಮಂಗಳೂರಿನಲ್ಲಿಯೇ ಇಂಥದ್ದೊಂದು ಮಾದರಿ ಕೆಲಸವೂ ನಡೆದಿದೆ.

ಕೋಮು ದ್ವೇಷವೇ ತುಂಬಿರುವ ಇತ್ತೀಚಿನ ದಿನಗಳಲ್ಲಿ ಧರ್ಮಕ್ಕೂ ಮೀರಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿದ ಭವಾನಿ ಎಂಬುವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಯಾರೂ ಬಂದಿರಲಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯದವರೆ ಸೇರಿ ಹಣ ಸಂಗ್ರಹಿಸಿ ಅಂತಿಮ ವಿಧಿ ವಿಧಾನದ ನೇರವೇರಿಸಿದರು. 

ಹುಟ್ಟುವಾಗ ಹಿಂದೂವಾಗಿ ಹುಟ್ಟಿದ ಭವಾನಿ, ತಾನು ಸತ್ತಾಗ ನನ್ನನ್ನು ಮುಸ್ಲಿಂಮರಿಂದ ಅಂತ್ಯ ಸಂಸ್ಕಾರಕ್ಕೆ ಒಳಗಾಗುತ್ತೇನೆ ಎಂದು ಯಾವಾಗಲೂ ಯೋಚಿಸಿರಲಿಲ್ಲವೆನೋ! ಪುತ್ತೂರು ಕಬಕದ ವಿದ್ಯಾಪುರ ಜನವಸತಿ ಕಾಲನಿಯಲ್ಲಿ ವಾಸವಾಗಿದ್ದ ಭವಾನಿ ಅವರಿಗೆ ಮದುವೆ ಆಗಿರಲಿಲ್ಲ. ಸಹೋದರ ಕೃಷ್ಣ ಎಂಬುವರ ಜತೆ ವಾಸವಿದ್ದ ಕುಟುಂಬಕ್ಕೆ ಆರ್ಥಿಕ ಮುಗ್ಗಟ್ಟು ಕಾಡುತ್ತಿತ್ತು. ಭವಾನಿ ತೀರಿಕೊಂಡಾಗ ಹತ್ತಿರದ ಹಿಂದೂಗಳ ಬಳಿ ಮವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನೆರವಿಗೆ ಬಂದಿದ್ದು ಮುಸ್ಲಿಂ ಯುವಕರು ಮತ್ತು ಮಹಿಳೆಯರು. ಸಣ್ಣಪುಟ್ಟ ಮೊತ್ತ ಸಂಗ್ರಹಿಸಿ ಭವಾನಿಯವರ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ಮಾಡಲಾಯಿತು.

loader