ಮಂಗಳೂರಿನಲ್ಲಿ  ನಡೆದ ಲವ್​ ಜಿಹಾದ್​ ಆರೋಪ ಪ್ರಕರಣ ಟ್ವಿಸ್ಟ್​ ಪಡೆದುಕೊಂಡಿದ್ದು, ಮುಂಬೈ ಹೈಕೋರ್ಟ್​ಗೆ ಹಾಜರಾದ ಯುವತಿ ನಾನು ಸ್ವಇಚ್ಛೆಯಿಂದ ಮುಂಬೈಗೆ ಬಂದಿದ್ದಾಗಿ ಮುಂಬೈ ಹೈಕೋರ್ಟ್​ಗೆ ಅಫಡವಿಟ್​ ಸಲ್ಲಿಸಿದ್ದಾಳೆ.

ಮಂಗಳೂರು (ಜ.23): ಮಂಗಳೂರಿನಲ್ಲಿ ನಡೆದ ಲವ್​ ಜಿಹಾದ್​ ಆರೋಪ ಪ್ರಕರಣ ಟ್ವಿಸ್ಟ್​ ಪಡೆದುಕೊಂಡಿದ್ದು, ಮುಂಬೈ ಹೈಕೋರ್ಟ್​ಗೆ ಹಾಜರಾದ ಯುವತಿ ನಾನು ಸ್ವಇಚ್ಛೆಯಿಂದ ಮುಂಬೈಗೆ ಬಂದಿದ್ದಾಗಿ ಮುಂಬೈ ಹೈಕೋರ್ಟ್​ಗೆ ಅಫಡವಿಟ್​ ಸಲ್ಲಿಸಿದ್ದಾಳೆ.

ಯುವತಿ ಆಸೆಯಂತೆ ಹೆತ್ತವರ ಜತೆ ತೆರಳಲು ಕೋರ್ಟ್​ ಸಮ್ಮತಿ ನೀಡಿ, ಆದೇಶ ಹೊರಡಿಸಿದೆ. ಯುವತಿಯನ್ನು ಅಪಹರಿಸಿದ್ದಾಗಿ ಪೋಷಕರು ಕೇಸ್​ ದಾಖಲಿಸಿದ್ದರು. ಇನ್ನೂ ಯುವತಿ ಕರೆದುಕೊಂಡು ಹೋಗಿದ್ದ ಮೊಹಮ್ಮದ್​ ಇಕ್ಬಾಲ್ ಕೂಡ ಅವಳನ್ನು ಅಪಹರಿಸಿದ್ದಾಗಿ ಮುಂಬೈನ ವಾಶಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಆದ್ರೆ, ಮೊಹಮ್ಮದ್ ಇಕ್ಬಾಲ್ ದೂರಿನ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಮುಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಯುವತಿ ಅನ್ಯ ಕೋಮಿನ ಯುವಕನ ಜತೆ ಮುಂಬೈಗೆ ತೆರಳಿದ್ದಳು. ಆಗ ಹಿಂದೂಪರ ಸಂಘಟನೆಗಳು ಇದೊಂದು ಲವ್​ ಜಿಹಾದ್​ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು.