ಬಶೀರ್ ಹತ್ಯೆಗೆ ಜೈಲಲ್ಲೇ ಸ್ಕೆಚ್ : ಬಯಲಾಯ್ತು ಸ್ಫೋಟಕ ಮಾಹಿತಿ

Mangaluru Bhashir Murder Case
Highlights

ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಪ್ರಕರಣ ಸಂಬಂಧ ಇದೀಗ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಮಂಗಳೂರು (ಜ.24): ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಪ್ರಕರಣ ಸಂಬಂಧ ಇದೀಗ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ಬಶೀರ್ ಹತ್ಯೆಗೆ ಜೈಲಿನಿಂದಲೇ ಸ್ಕೆಚ್ ಹಾಕಲಾದ ವಿಚಾರವೊಂದು ಬೆಳಕಿಗೆ ಬಂದಿದೆ. ಕಲ್ಲಡ್ಕದಲ್ಲಿ ನಡೆದಿದ್ದ ಕೋಮು ಸಂಘರ್ಷದ ರೂವಾರಿ ಮಿಥುನ್,  ದೀಪಕ್ ರಾವ್ ಕೊಲೆ ಬೆನ್ನಲ್ಲೇ ಈ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

ಜೈಲಿನಲ್ಲೇ ಮಿಥುನ್ ಭೇಟಿಯಾದ ತಿಲಕ್ ರಾಜ್, ರಾಜು ಎಂಬುವವರು ಹೊರಗಿದ್ದ ಅನುಪ್ ಎಂಬಾತನ ಮೂಲಕ ಹತ್ಯೆಗೆ ಸ್ಕೆಚ್ ಹಾಕಿದ್ದರು. ಬಳಿಕ ಒಂದಷ್ಟು ಜನರನ್ನು ಸೇರಿಸಿ ಜ.3ರಂದು ಕೊಟ್ಟಾರದಲ್ಲಿ ಬಶೀರ್ ಹತ್ಯೆ ಯತ್ನ ನಡೆದಿತ್ತು. ಜನವರಿ 7ರಂದು ಬಶೀರ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

 

loader