ಕಂಠೀರವ ಸ್ಟುಡಿಯೋ ಬಳಿ ಅಂಡರ್'ಪಾಸ್'ಗೆ ಭೂಮಿ ಕಳೆದುಕೊಂಡಿದ್ದ ಮಹಿಳೆಯೇ ಮಂಗಳಾ. ಈಕೆ ಕಳೆದುಕೊಂಡಿದ್ದು 1350 ಚದರಡಿ ವಿಸ್ತೀರ್ಣದ ಕಾಂಪ್ಲೆಕ್ಸ್. ಮೂರು ಫ್ಲೋರ್'ನಲ್ಲಿ ವಾಣಿಜ್ಯ ಮಳಿಗೆಗಳಿವೆ. ಆಕೆ ತನ್ನ ಸ್ವತ್ತು ಅನುಭವಿಸಿದ್ದರೆ, ಬರುವ ಬಾಡಿಗೆಯಿಂದ ಕುಟುಂಬವಾದರೂ ನಡೆಯುತ್ತಿತ್ತು. ಆದರೆ, ಅದನ್ನು 3 ವರ್ಷದ ಹಿಂದೆ ಸ್ವಾಧೀನ ಪಡಿಸಿಕೊಂಡ ಸರ್ಕಾರ, ಪರಿಹಾರ ನೀಡದೇ ಸತಾಯಿಸುತ್ತಾ ಬಂದಿದೆ. ಇದರಿಂದ ಬೇಸತ್ತ ಮಂಗಳಾ ಮೊನ್ನೆ ಸಾಯಲು ಹೊರಟ್ಟಿದ್ದರು. ಅದೃಷ್ಟ ಚೆನ್ನಾಗಿತ್ತು ಬದುಕುಳಿದರು.
ಬೆಂಗಳೂರು(ಅ.26): ಪರಿಹಾರ ಹಣ ನೀಡದೇ ಮೊಂಡುತನ ಪ್ರದರ್ಶಿಸುತ್ತಿದ್ದ ಬಿಡಿಎ ಕೊನೆಗೂ ತಾತ್ಕಾಲಿಕ ನೆರವು ನೀಡಲು ಮುಂದಾಗಿದೆ. ಪರಿಹಾರ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಂಜಳಾಗೆ ತಾತ್ಕಾಲಿಕ ಪರಿಹಾರ ನೀಡಿದೆ. 25 ಲಕ್ಷ ಪರಿಹಾರ ಚೆಕ್ ನೀಡಿದ್ದು, ಉಳಿದ ಸಂತ್ರಸ್ಥರಿಗೆ ಇನ್ನೊಂದು ತಿಂಗಳಲ್ಲಿ ಪರಿಹಾರ ನೀಡೋದಾಗಿ ಬಿಡಿಎ ಭರವಸೆ ನೀಡಿದೆ.
ಕಂಠೀರವ ಸ್ಟುಡಿಯೋ ಬಳಿ ಅಂಡರ್'ಪಾಸ್'ಗೆ ಭೂಮಿ ಕಳೆದುಕೊಂಡಿದ್ದ ಮಹಿಳೆಯೇ ಮಂಗಳಾ. ಈಕೆ ಕಳೆದುಕೊಂಡಿದ್ದು 1350 ಚದರಡಿ ವಿಸ್ತೀರ್ಣದ ಕಾಂಪ್ಲೆಕ್ಸ್. ಮೂರು ಫ್ಲೋರ್'ನಲ್ಲಿ ವಾಣಿಜ್ಯ ಮಳಿಗೆಗಳಿವೆ. ಆಕೆ ತನ್ನ ಸ್ವತ್ತು ಅನುಭವಿಸಿದ್ದರೆ, ಬರುವ ಬಾಡಿಗೆಯಿಂದ ಕುಟುಂಬವಾದರೂ ನಡೆಯುತ್ತಿತ್ತು. ಆದರೆ, ಅದನ್ನು 3 ವರ್ಷದ ಹಿಂದೆ ಸ್ವಾಧೀನ ಪಡಿಸಿಕೊಂಡ ಸರ್ಕಾರ, ಪರಿಹಾರ ನೀಡದೇ ಸತಾಯಿಸುತ್ತಾ ಬಂದಿದೆ. ಇದರಿಂದ ಬೇಸತ್ತ ಮಂಗಳಾ ಮೊನ್ನೆ ಸಾಯಲು ಹೊರಟ್ಟಿದ್ದರು. ಅದೃಷ್ಟ ಚೆನ್ನಾಗಿತ್ತು ಬದುಕುಳಿದರು.
ಈ ವಿಚಾರಕ್ಕೆ ಸಂಬಂದಪಟ್ಟಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಮಂಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವ್ರು ವಶಪಡಿಸಿಕೊಂಡ ಜಾಗ ಬೇಕೋ ಬೇಡವೋ ಎನ್ನುವುದನ್ನು ಪರಿಶೀಲಿಸಿ ನಿರ್ಧರಿಸುತ್ತೇವೆ ಅಂತಾ ಹೇಳಿದ್ದಾರೆ.
ಗೃಹ ಸಚಿವರ ಈ ಹೇಳಿಕೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತ ಬಿಡಿಎ ಅಧಿಕಾರಿಗಳು ಆತ್ಮಹತ್ಯೆಗೆ ಯತ್ನಿಸಿದ್ದ ಮಂಗಳಾ ಅವರಿಗೆ ತಾತ್ಕಾಲಿಕ ಪರಿಹಾರ ನೀಡಿದ್ದಾರೆ. ಮಂಗಳಾ ಪುತ್ರ ಕಾರ್ತಿಕ್'ಗೆ 25 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಉಳಿದ ಹಣವನ್ನು ಇದೇ ಶುಕ್ರವಾರ ನೀಡುವುದಾಗಿ ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಉಳಿದ 17 ಸಂತ್ರಸ್ಥರಿಗೆ ಇನ್ನೊಂದು ತಿಂಗಳಲ್ಲಿ ಹಣ ನೀಡುವುದಾಗಿ ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಂಗಳಾ ಅವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಆದರೆ ಉಳಿದ 17 ಸಂತ್ರಸ್ಥರಿಗೂ ನುಡಿದಂತೆ ಒಂದು ತಿಂಗಳಲ್ಲಿ ಪರಿಹಾರ ನೀಡುತ್ತಾ ಕಾದು ನೋಡಬೇಕಾಗಿದೆ.