ಮಾನಸಿಕ ಅಸ್ವಸ್ಥನಿಗೆ ಮರುಜೀವ ನೀಡಿದ ಮಂಡ್ಯ ಯುವಕರು

Mandya Youths Rescue Mentally Challenged Youth
Highlights

ಮಾನಸಿಕ ಅಸ್ವಸ್ಥರನ್ನು ಕಂಡರೆ ಅಸಹ್ಯ ಪಟ್ಟು ದೂರ ಓಡೊ ಈ ಕಾಲದಲ್ಲಿ, ಕಸದ ರಾಶಿಯ ಮಧ್ಯೆ ಮಲಗುತ್ತಿದ್ದ ವ್ಯಕ್ತಿಗೆ ಮರುಜೀವನ ನೀಡಿ, ಈ ಪ್ರಪಂಚದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೇ ಅನ್ನೋದನ್ನ ಕೆಲ ಯುವಕರು ತೋರಿಸಿಕೊಟ್ಟಿದ್ದಾರೆ. ಹಾಗಾದ್ರೆ ಆ ಯುವಕರು ಮಾಡಿದ ಮನಮುಟ್ಟೋ ಕೆಲಸ ಏನು ಅಂತಿರಾ..? ಮಿಸ್ ಮಾಡ್ದೆ ಈ ಸ್ಟೋರಿ ನೋಡಿ... 
 

ಮಂಡ್ಯ: ಕಸದ ರಾಶಿಯಲ್ಲಿ ಬಿದ್ದಿರೋ ಮಾನಸಿಕ ಅಸ್ವಸ್ಥನಿಗೆ ಶೇವಿಂಗ್ ಮಾಡಿ, ಸ್ನಾನ‌ಮಾಡ್ಸಿ, ಹೊಸ ಕಳೆ ನೀಡಿದ ಯುವಕರು ಈ ದೃಶ್ಯಗಳೆಲ್ಲಾ ಕಂಡುಬಂದಿದ್ದು ನಾಗಮಂಗಲದ ಸ್ಟಾರ್ ಪೆಟ್ರೋಲ್‌ ಬಂಕ್ ಬಳಿ.

ಹೌದು ಕಳೆದ ಒಂದು ತಿಂಗಳಿಂದ ಕಸದರಾಶಿಯಲ್ಲಿ 20ಕ್ಕೂ ಹೆಚ್ಚು ಹಳೆಯ ಶರ್ಟು ಪ್ಯಾಂಟ್ ಗಳನ್ನ ಧರಿಸಿಕೊಂಡು ಆರೋಗ್ಯ ಸರಿಯಿಲ್ಲದೆ ನರಳಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡ ಸ್ಥಳೀಯ ಯುವಕರು ಆತನಿಗೆ ಮರು ಜೀವ ನೀಡಿದ್ದಾರೆ. ಬ್ಯುಸಿ ಲೈಫ್ ನಡುವೇ ಮಾನವಿಯತೆ ಕಣ್ಮರೆಯಾಗ್ತಿದೆ ಅನ್ನೋ ಮಾತಿನ ಮಧ್ಯೆ ನಾಗಮಂಗಲದ ಯುವಕರ ಈ ಕಾರ್ಯ ಜನರ ಮನಮುಟ್ಟಿದೆ.

"

ತಮಿಳುನಾಡು ಮೂಲದ ಈ ಮಾನಸಿಕ ಅಸ್ವಸ್ಥನ ನರಳಾಟ ಕಂಡು ಸ್ಥಳಕ್ಕಾಗಿಮಿಸಿದ ಶರತ್ ರಾಮಣ‍್ಣ, ಸಾಧಿಕ್, ಅಕ್ಬರ್ ಪಾಷಾ, ಶಫಿರ್ ಪಾಷಾ ಎಂಬ ಯುವಕರು ಆತ ಧರಿಸಿದ್ದ ಹಳೆ ಬಟ್ಟೆಗಳನ್ನು ಕಳಚಿ. ಆತನಿಗೆ ಕಟಿಂಗ್, ಶೇವಿಂಗ್ ಮಾಡಿಸಿ, ನಂತ್ರ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಆರೈಕೆ ಮಾಡಿದ್ದಾರೆ

ಇನ್ನೂ ಈತನಿಗೆ ಬಟ್ಟೆ ಬದಲಿಸುತ್ತಿದ್ದಂತೆ ಆತನಿಗ ಚರ್ಮ ರೋಗ ಇರೋದು ಕಂಡು ಬಂದಿದೆ. ಕೂಡಲೇ ಆತನಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಮಾನಸಿಕ ಅಸ್ವಸ್ಥ ಎಲ್ಲರಂತೆ‌ ಮಾತನಾಡಲು ಶುರುಮಾಡಿದ್ದಾನೆ. ಕಸದ ರಾಶಿಯಲ್ಲಿದ ವ್ಯಕ್ತಿ ಇವನೇನಾ ಎಂದು ಸಹಾಯ ಮಾಡಿದ ಯುವಕರೇ ಆಶ್ಚರ್ಯಕ್ಕೊಳಗಾಗಿದ್ದಾರೆ.

ಇವರ ಈ ಒಂದೊಳ‍್ಳೆ ಕೆಲಸಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಮಂಡ್ಯ ಜಿಲ್ಲೆಯಾಧ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಾರೆ,‌ ಈ ಯುವಕರ ಕೆಲ್ಸ ಪ್ರತಿಯೊಬ್ಬರಿಗೂ ಮಾದರಿ. ಪ್ರತಿಯೊಬ್ಬರೂ ಮಾನಸಿಕ ಅಸ್ವಸ್ಥರನ್ನು ತಾತ್ಸಾರ ಪಡದೇ ಅನುಕಂಪದಿಂದ ಕಂಡು ಸೇವಾಮನೋಭಾವದಿಂದ ನೋಡಿದರೆ ಅದು ನಿಜಕ್ಕೂ ಪುಣ್ಯದ ಕೆಲಸ.

ಕ್ಯಾಮೆರಾ: ಮಹೇಶ್ | ವರದಿ: ನಂದನ್ ರಾಮಕೃಷ್ಣ 

loader