ಕಾಂಗ್ರೆಸ್ ನಾಯಕ ಮಾಜಿ ಸಿ.ಎಂ. ಎಸ್.ಎಂ.ಕೃಷ್ಣ ಬಿಜೆಪಿ ಗೆ ಸೇರ್ಪಡೆ ಯಾಗುತ್ತಿರುವ ಬೆನ್ನಲ್ಲೆ ಅವರ ಹಿಂಬಾಲಕರು ಕೂಡ  ಬಿಜೆಪಿ ಸೇರ್ಪಡೆಯಾಗಿಲ್ಲಿದ್ದಾರೆಂಬ ಮಾಹಿತಿ ಈಗ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಇದಕ್ಕೆ ಕಾರಣವಾಗಿರೋದು ಮಂಡ್ಯದ ಮಾಜಿ ಸಂಸದೆ ಕು.ರಮ್ಯಾ ಕೂಡ ಬಿಜೆಪಿ ಸೇರಲಿದ್ದಾರೆಂಬ ಮಾಹಿತಿ ಈಗ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಡ್ಯ(ಮಾ.14): ಮಾಜಿ ಸಿ.ಎಂ. ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆ ಯಾಗುತ್ತಿರುವ ಬೆನ್ನಲ್ಲೆ ಅವರ ಹಿಂಬಾಲಕರು ಕೂಡ ಬಿಜೆಪಿ ಸೇರ್ಪಡೆಯಾಗಿಲ್ಲಿದ್ದಾರೆಂಬ ಮಾಹಿತಿ ಈಗ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಇದಕ್ಕೆ ಕಾರಣವಾಗಿರೋದು ಮಂಡ್ಯದ ಮಾಜಿ ಸಂಸದೆ ಕು.ರಮ್ಯಾ ಕೂಡ ಬಿಜೆಪಿ ಸೇರಲಿದ್ದಾರೆಂಬ ಮಾಹಿತಿ ಈಗ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ಬಾರಿ ರಮ್ಯಾ ಮಂಡ್ಯದಲ್ಲಿ ಪಾಕಿಸ್ತಾನ ಪರ ಹೇಳಿಕೆ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿತ್ತು, RSS ಏನೂ ಮಾಡಿಲ್ಲ ಅಂತಾ ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯದ ಮತ್ತು ಮಂಡ್ಯದ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ರು.

ಇಂದು ಸುದ್ದಿ ಮಾಧ್ಯಮದಲ್ಲಿ ರಮ್ಯಾ ಎಸ್ಎಂಕೆ.ಜೊತೆ ಬಿಜೆಪಿ ಸೇರಲಿದ್ದಾರೆಂಬ ಸುದ್ದಿ ಬರ್ತಿದ್ದಂತೆ ರಮ್ಯಾಯ ಬಿಜೆಪಿಗೆ ಬೇಡ ಅಂತ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದು, ಒಂದು ವೇಳೆ ಅವರನ್ನು ಪಕ್ಷಕ್ಕೆ ಕರೆ ತಂದರೆ ರಾಜ್ಯಾಧ್ಯಕ್ಷರ ಕಚೇರಿ‌ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.