ಮಂಡ್ಯ[ಜು.8]  ದೆಹಲಿಯ ಬುರಾರಿಯಲ್ಲಿ ಭಾಟಿಯಾ ಕುಟುಂಬದ ನಿಗೂಢ ಸಾವಿನ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಮಂಡ್ಯದಲ್ಲಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋಸಿದ ಪ್ರಕರಣ ವರದಿಯಾಗಿದೆ. 

ಮಂಡ್ಯ ತಾಲೂಕಿನ ಮಾರಗೊಂಡನಹಳ್ಳಿಯ ಅನಿತಾ ಎಂಬುವವರಿಗೆ ತೃತೀಯ ಲಿಂಗಿಯೊಬ್ಬರು ಪ್ರಚೋದನೆ ನೀಡಿದ್ದಾರೆ. ನೀನು ಸತ್ತರೆ ನಿನ್ನ ಸಾವಿನಿಂದ ಮಕ್ಕಳಿಗೆ ಮೋಕ್ಷ ಸಿಗುತ್ತದೆ ಎಂದು ಹೇಳಿದ್ದಾರೆ. ಅನಿತಾ ಆಘಾತಕಾರಿ ಅಂಶವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ವೃತ್ತಿಯಲ್ಲಿ ಟೈಲರ್​ ಆಗಿರುವ ಅನಿತಾ ಮತ್ತು ಅವರ ಪತಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ವಾಸವಾಗಿದ್ದಾರೆ. ನೀನು ನೇಣು ಹಾಕಿಕೊಂಡರೆ ಮಕ್ಕಳಿಗೆ ಮುಕ್ತಿ ಮತ್ತು ಮೋಕ್ಷ ಸಿಗುತ್ತದೆ ಎಂದು ತೃತೀಯ ಲಿಂಗಿ ಮಾಂತ್ರಿಕನೊಬ್ಬ ಪ್ರಚೋದನೆ ನೀಡಿದ್ದ.