ರಾಜ್ಯದಲ್ಲಿ ಖಾಸಗಿ ವೈದ್ಯರು ರಾಜ್ಯ ಸರ್ಕಾರದ KPME ಕಾಯ್ದೆ ವಿರೋಧಿಸಿ ಮುಷ್ಕರ ನಡೆಸ್ತಿದ್ದಾರೆ.ಇದ್ರಿಂದ ಎಲ್ಲೆಡೆ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ. ಹಲವೆಡೆ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆಗಳು ಕೂಡ ವರದಿಯಾಗಿದೆ. ಆದ್ರೆ ಸಕ್ಕರೆ ಜಿಲ್ಲೆಯಲ್ಲಿ ಓರ್ವ ಪ್ರಸಿದ್ದ ಚರ್ಮ ರೋಗ ವೈದ್ಯ ಶಂಕರೇಗೌಡ್ರು ಮಾತ್ರ ಇದ್ಯಾವರ ಪರಿವೆ ಇಲ್ಲದೆ ತಮ್ಮ ನಿತ್ಯದ ಕಾಯಕ ಮುಂದುವರೆಸ್ತಿದ್ದು ರೋಗಿಗಳ ಸೇವೆ ಮಾಡುತ್ತಾ ಮಾದರಿ ಎನಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ವೈದ್ಯರು ರಾಜ್ಯ ಸರ್ಕಾರದ KPME ಕಾಯ್ದೆ ವಿರೋಧಿಸಿ ಮುಷ್ಕರ ನಡೆಸ್ತಿದ್ದಾರೆ.ಇದ್ರಿಂದ ಎಲ್ಲೆಡೆ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡ್ತಿದ್ದಾರೆ. ಹಲವೆಡೆ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ಘಟನೆಗಳು ಕೂಡ ವರದಿಯಾಗಿದೆ.
ಆದ್ರೆ ಸಕ್ಕರೆ ಜಿಲ್ಲೆಯಲ್ಲಿ ಓರ್ವ ಪ್ರಸಿದ್ದ ಚರ್ಮ ರೋಗ ವೈದ್ಯ ಶಂಕರೇಗೌಡ್ರು ಮಾತ್ರ ಇದ್ಯಾವರ ಪರಿವೆ ಇಲ್ಲದೆ ತಮ್ಮ ನಿತ್ಯದ ಕಾಯಕ ಮುಂದುವರೆಸ್ತಿದ್ದು ರೋಗಿಗಳ ಸೇವೆ ಮಾಡುತ್ತಾ ಮಾದರಿ ಎನಿಸಿದ್ದಾರೆ.
ಇವ್ರು ಕೇವಲ ತಮ್ಮ ಚಿಕಿತ್ಸೆಯ ಶುಲ್ಕವಾಗಿ ತಮ್ಮ ಮಂಡ್ಯದಲ್ಲಿರುವ ತಾರಾ ಕ್ಲೀನಿಕ್ ನಲ್ಲಿ 5 ರುಪಾಯಿ ಪಡೆದ್ರೆ ತಮ್ಮ ಊರಾದ ಶಿವಳ್ಳಿಗೆ ಬಂದ ರೋಗಿಗಳಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ,ಚಿಕಿತ್ಸೆ ನೀಡ್ತಿದ್ದಾರೆ.
ಇದರಿಂದಾಗಿಯೇ ಇವ್ರು ಮಂಡ್ಯ ಜಿಲ್ಲೆಯಲ್ಲಿ ಐದ್ರುಪಾಯಿ ಡಾಕ್ಟ್ರು ಅಂತಲೇ ಪ್ರಸಿದ್ದಿ ಪಡೆದಿದ್ದಾರೆ. ಈ ಪ್ರಸಿದ್ದ ವೈದ್ಯರ ಜೊತೆ ನಮ್ಮ ಮಂಡ್ಯ ಪ್ರತಿನಿಧಿ ರಾಘವೇಂದ್ರ ಚಿಟ್ ಚಾಟ್ ನಡೆಸಿದ್ದು ಸರ್ಕಾರ ಜಾರಿಗೆ ತರಲು ಹೊರಟ ಕಾಯ್ದೆ ಬಗ್ಗೆ ಮತ್ತು ಖಾಸಗಿ ವೈದ್ಯರ ಮುಷ್ಕರ ಕುರಿತಾಗಿ ಮಾತನಾಡಿದ್ದಾರೆ. ಅವರು ಏನೆಲ್ಲಾ ಮಾತನಾಡಿದ್ದಾರೆ ಎಂದು ನೋಡೋಣ ಬನ್ನಿ..
(ಮಂಡ್ಯದಿಂದ ಕ್ಯಾಮರಮೆನ್ ಮಹೇಶ್ ಜೊತೆ ರಾಘವೇಂದ್ರ ಗಂಜಾಮ್ ಸುವರ್ಣನ್ಯೂಸ್)
