ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಸುಮಲತಾ, ತಮ್ಮ ಸ್ಥಿತ ಪ್ರಜ್ಞೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧವಾಗಲಿ, ತಮ್ಮ ಮುಂದಿನ ನಡೆ ಬಗ್ಗೆಯಾಗಲೀ ಯಾವುದೇ ಗುಟ್ಟನ್ನೂ ಬಿಟ್ಟು ಕೊಡುತ್ತಿಲ್ಲ. 

'ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾನು ಯಾರ ಬಗ್ಗೆಯೂ ಕೂಡ ಕೀಳಾಗಿ ಮಾತನಾಡಿಲ್ಲ. ಈಗಲೂ ಮಾತನಾಡುವುದಿಲ್ಲ,' ಎಂದು ಹೇಳುವ ಮೂಲಕ ತಮ್ಮ ಬಳಿ ಇನ್ನೊಬ್ಬರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಡಕ್ ಆಗಿ ಹೇಳಿದರು.

ಸುಮಲತಾರನ್ನು ಇವರು ಮದುವೆ ಆಗ್ತೀನಿ ಎಂದಿದ್ರಂತೆ!

ಮಂಡ್ಯದ ಕಿಲಾರ ಗ್ರಾಮದಲ್ಲಿ ಮಾತನಾಡಿದ ಅವರು, 'ಮಂಡ್ಯ ಮಂದಿ ನನಗೆ ಜವಾಬ್ದಾರಿ ನೀಡಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ. ಬರ, ನೀರಿನ ಸಮಸ್ಯೆ ಹೆಚ್ಚಿದೆ. ಇವುಗಳನ್ನ ಬಗೆಹರಿಸುವತ್ತ. ಗಮನ ಹರಿಸಬೇಕು. ಟೀಕೆಗಳ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಇದು ರಾಜಕಾರಣ ಮಾಡುವ ಸಮಯವಲ್ಲ,' ಎಂದು ಹೇಳುವ ಮೂಲಕ ಜೆಡಿಎಸ್ ಮುಖಂಡರ ಆರೋಪಗಳಿಗೆ ಉತ್ತರಿಸದೇ ಪ್ರಬುದ್ಧತೆ ಮೆರೆದಿದ್ದಾರೆ.

ಇನ್ನು ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆಯೂ ಮೇಡಮ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡುತ್ತೇನೆ, ಎಂದರು.

ಈ ನಟನ ಮೇಲೆ ಕ್ರಶ್ ಇತ್ತಂತೆ ಸುಮಲತಾಗೆ

'ನಾನು ಸಾಮಾನ್ಯರ ಫೋನ್ ಪಿಕ್ ಮಾಡುವುದಿಲ್ಲ ಎನ್ನುವ ಆರೋಪಗಳು ಬಂದಿದ್ದು, ದೆಹಲಿಯಲ್ಲಿ ಇದ್ದಾಗ ಫೋನ್ ಪಿಕ್ ಮಾಡಿಲ್ಲ. ಆದರೆ ಮುಂದೆ ಹೀಗಾಗದು, ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಿಸುತ್ತೇನೆ' ಎಂದು ಭರವಸೆ ನೀಡಿದರು.

ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ,  ನಾನು ನಾನಾಗೇ ಇದ್ದು ಬಿಡ್ತೀನಿ. ಮಂಡ್ಯ ಜನರ ಪರ ಸದಾ ಇರುತ್ತೇನೆ, ಎಂದರು.

ಬಿಜೆಪಿ ಮೆಚ್ಚಿಸಲು ಸುಮಲತಾ ರಾಜೀನಾಮೆ ಹೇಳಿಕೆ