ಸಿಎಂ ಸಿದ್ದರಾಮಯ್ಯ  ಇದೇ ಭಾನುವಾರ ಮೀನುಗಾರರ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಎಂ ಮೆಚ್ಚಿಸಲು ಕಾಲೇಜು ಕಾಂಪೌಂಡನ್ನೇ  ಮತ್ತೊಮ್ಮೆ ಒಡೆದಿದ್ದಾರೆ.

ಮಂಡ್ಯ (ಅ.27): ಸಿಎಂ ಸಿದ್ದರಾಮಯ್ಯ ಇದೇ ಭಾನುವಾರ ಮೀನುಗಾರರ ಸಮಾವೇಶಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸಿಎಂ ಮೆಚ್ಚಿಸಲು ಕಾಲೇಜು ಕಾಂಪೌಂಡನ್ನೇ ಮತ್ತೊಮ್ಮೆ ಒಡೆದಿದ್ದಾರೆ.

ಕಳೆದ ತಿಂಗಳ 8ರಂದು ಸಿಎಂಗಾಗಿ ಅಧಿಕಾರಿಗಳು ಕಾಂಪೌಂಡ್ ಒಡೆದಿದ್ದರು. ಸಾರ್ವಜನಿಕ ಟೀಕೆ ಬರುತ್ತಿದ್ದಂತೆ ಮತ್ತೊಮ್ಮೆ ಕಟ್ಟಿದ್ದಾರೆ. ಈಗ ಚೆನ್ನಾಗಿದ್ದ ಕಾಂಪೌಂಡನ್ನು ಮತ್ತೊಮ್ಮೆ ಒಡೆದಿದ್ದಾರೆ. ಜಿಲ್ಲಾಡಳಿತದ ದುಂದು ವೆಚ್ಚದ ದರ್ಬಾರ್​​ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.