ಮಂಡ್ಯ (ಮಾ. 04):  ‘ಮೊದಲು ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಫೈನಲ್‌ ಮಾಡಲಿ. ನಂತರ ನಾವು ಮಂಡ್ಯದ ಅಭ್ಯರ್ಥಿಯನ್ನು ಪ್ರಕಟಿಸುತ್ತೇವೆ’ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಸುಮಲತಾಗೆ ಅದೃಷ್ಟ ತಂದು ಕೊಡುತ್ತಾ ಅಂಬಿ ಮನೆ?

ಮಂಡ್ಯದಿಂದ ಸುಮಲತಾ ಅಂಬರೀಷ್‌ ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವುದು, ಬಿಡುವುದು ಕಾಂಗ್ರೆಸ್‌-ಜೆಡಿಎಸ್‌ ಗೆ ಬಿಟ್ಟವಿಚಾರ, ಮೈತ್ರಿ ಪಕ್ಷಗಳ ಅಭ್ಯರ್ಥಿ ಅಂತಿಮವಾದ ಮೇಲೆಯೇ ನಾವು ಅಭ್ಯರ್ಥಿ ಯಾರು ಎಂಬುದನ್ನು ಪ್ರಕಟಿಸುತ್ತೇವೆ ಎಂದು ಹೇಳಿದರು.

ಅಭಿಗೆ ಮತ್ತೆ ವಿಮಾನ ನೀಡಬೇಕಾ? ಬೆಂಗಳೂರಲ್ಲಿ ನಿರ್ಧಾರ

ನಮ್ಮ ಅಭ್ಯರ್ಥಿಯನ್ನು ನಾವು ಇನ್ನೂ ಆಯ್ಕೆ ಮಾಡಿಲ್ಲ. ಅಲ್ಲದೇ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತದೆ ಎಂದು ಹೇಳುವುದೂ ಕೂಡ ಸರಿ ಅಲ್ಲ. ಸದ್ಯಕ್ಕೆ ಅಂತಹ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಅಂಬರೀಷ್‌ ಅವರ ಮುಂದಿನ ನಡೆ ಆಧರಿಸಿಯೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ. ಸುಮಲತಾ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವೂ ನಡೆದಿದೆ. ಆದರೆ, ಅದಕ್ಕೆ ಸುಮಲತಾ ಅವರು ಒಪ್ಪಿಗೆ ನೀಡಿಲ್ಲ. ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಬೆಂಬಲಿಸುವ ಉದ್ದೇಶವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.